ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಮಂತೂರು: ಸಂಭ್ರಮದ ಜಾತ್ರಾ ಮಹೋತ್ಸವ ಸಂಪನ್ನ

ಮುಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು.ಸಾವಿರಾರು ಮಂದಿ ಭಕ್ತಾದಿಗಳು ರಥೋತ್ಸವದಲ್ಲಿ ಭಾಗಿಯಾದರು.

ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರು ಪಲ್ಲಕ್ಕಿಯಲ್ಲಿ ವಿರಾಜಮಾನರಾಗಿ ನಡೆದ ಉತ್ಸವಬಲಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಪ್ಪನಾಡು ನಾಗೇಶ್ ಅವರ ನಾಗಸ್ವರ ವಾದನ, ಮಕ್ಕಳ ಕುಣಿತ ಭಜನೆ, ವಿವಿಧ ಬಿರುದಾವಳಿಗಳೊಂದಿಗೆ ಚೆಂಡೆ ಸುತ್ತು ಭಕ್ತಾಧಿಗಳನ್ನು ರೋಮಾಂಚನಗೊಳಿಸಿತು.

ಬಳಿಕ ಶ್ರೀ ದೇವರ ಕಟ್ಟೆಪೂಜೆ, ರಥೋತ್ಸವ, ಸುಡುಮದ್ದು ಪ್ರದರ್ಶನ ನಡೆದು ಸಾವಿರಾರು ಭಕ್ತಾದಿಗಳು ಶ್ರೀದೇವರ ರಥ ಎಳೆದು ಪುನೀತರಾದರು ಬಳಿಕ ದೇವರ ಅವಭೃತ ಸ್ನಾನ ನಡೆದು ಜಲಕದ ಬಲಿ, ಧ್ವಜಾವರೋ ಹಣ ನಡೆದು ಜಾತ್ರಾಮಹೋತ್ಸವ ಸಂಪನ್ನಗೊಂಡಿತು.

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಈಶ್ವರ ಕಟೀಲ್, ಬಾಬಾ ರಂಜನ್ ಶೆಟ್ಟಿ ಮಜಲಗುತ್ತು, ರಂಗನಾಥ ಶೆಟ್ಟಿ, ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ ಮತ್ತಿತರರು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಮುಲ್ಕಿ ಪೊಲೀಸ್ ಠಾಣಾ ಎಎಸ್ಐ ಚಂದ್ರಶೇಖರ್, ಸತೀಶ್ ಶೆಟ್ಟಿ ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

21/02/2022 01:28 pm

Cinque Terre

6.14 K

Cinque Terre

0

ಸಂಬಂಧಿತ ಸುದ್ದಿ