ಕಾಪು: ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಇಂದು ಧ್ವಜಾರೋಹಣ ಜರಗಿತು.
ದೇಗುಲದ ಪ್ರಧಾನ ತಂತ್ರಿಗಳಾದ ವೇ| ಮೂ| ಶ್ರೀಶ ತಂತ್ರಿ ಕಲ್ಯ ಇವರ ನೇತೃತ್ವದಲ್ಲಿ ಅರ್ಚಕ ವೇ| ಮೂ| ನಾರಾಯಣ ತಂತ್ರಿಯವರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಪೂರ್ವಕ ವಿವಿಧ ಧಾರ್ಮಿಕ – ವಿಧಿ ವಿಧಾನಗಳು ಜರಗಿದ್ದು ಫೆಬ್ರವರಿ 18 ರಂದು ರಥೋತ್ಸವ ನಡೆಯಲಿದೆ.
ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ ,ಆಡಳಿತಾಧಿಕಾರಿ ಗಣೇಶ್ ಭಟ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮೋಹನ್ ಎಂ. ಬಂಗೇರ, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಗಣ್ಯರಾದ ನಡಿಕೆರೆ ರತ್ನಾಕರ ಶೆಟ್ಟಿ, ರಮೇಶ್ ಹೆಗ್ಡೆ ಕಲ್ಯ, ರತ್ನಾಕರ ಹೆಗ್ಡೆ ಕಲೀಲಬೀಡು, ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಕರ ಶೆಟ್ಟಿ ಕಲ್ಯ, ಗಂಗಾಧರ ಸುವರ್ಣ, ಸುರೇಶ್ ಶೆಟ್ಟಿ ಅಯೋಧ್ಯಾ, ಶ್ರೀಧರ ಶೆಣೈ, ಸಂದೀಪ್ ಶೆಟ್ಟಿ ಕಲ್ಯಾ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
12/02/2022 05:55 pm