ಮುಲ್ಕಿ: ಮುಲ್ಕಿ ಸಮೀಪದ ಕೊಲ್ಲೂರು ಶ್ರೀ ಕಾಂತಬಾರೆ ಬೂದಬಾರೆ ಜನ್ಮ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಸೇವೆ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ ಏಳಿಂಜೆ ವೇ.ಮೂ. ಶ್ರೀಧರ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ಶ್ರೀ ನಾಗ ದೇವರ ಸನ್ನಿಧಿಯಲ್ಲಿ ನಾಗತಂಬಿಲ ಪೂರ್ವಕ ಪ್ರಸನ್ನ ಪೂಜೆ, ದೈವಗಳ ಭಂಡಾರ ಆಗಮನವಾಯಿತು.
ಬೆಳಿಗ್ಗೆ11ಗಂಟೆಗೆ ಸಾಮೂಹಿಕ ಆಶ್ಲೇಷ ಬಲಿ ಸೇವೆ, ಮಹಾಮಂಗಳಾರತಿ ನಡೆದು ತಿರುಪತಿ ದೇವರಿಗೆ ಕಾಣಿಕೆ ಅರ್ಪಣೆ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆದು ಸಂಜೆ 3 ಗಂಟೆಗೆ ಜಾರಂದಾಯ ಗುಡ್ಡ ಧೂಮಾವತಿ ಸರಳ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ನಡೆಯಿತು.
ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ನೋಟರಿ ಬಿಪಿನ್ ಪ್ರಸಾದ್, ಕಿಲ್ಪಾಡಿ ಗ್ರಾಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ ಮತ್ತಿತರರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಕೊಲ್ಲೂರು ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮ ಕ್ಷೇತ್ರದ ದಾಮೋದರ ದಂಡಕೇರಿ, ಗಂಗಾಧರ ಪೂಜಾರಿ ಶೀನ ಪೂಜಾರಿ, ಹರೀಂದ್ರ ಸುವರ್ಣ, ಎಲ್ಲಪ್ಪ ಟಿ ಸಾಲ್ಯಾನ್, ಚಂದ್ರಹಾಸ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/02/2022 08:30 pm