ಕಾಪು: ಇತಿಹಾಸ ಪ್ರಸಿದ್ಧ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ಇಂದು ರಾತ್ರಿ ಬಲಿ ಉತ್ಸವ ಆರಂಭಗೊಂಡಿತು.
ವೇ.ಮೂ. ಶ್ರೀಶ ತಂತ್ರಿ ಕಲ್ಯ, ಅರ್ಚಕ ವೇ.ಮೂ. ನಾರಾಯಣ ತಂತ್ರಿ ನೇತೃತ್ವದಲ್ಲಿ ಕಾಪು ಸಾವಿರ ಸೀಮೆ ಭಕ್ತರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಉತ್ಸವ ಬಲಿಗೆ ಚಾಲನೆ ನೀಡಲಾಯಿತು.
ಫೆ.2ರಿಂದ ಮೊದಲ್ಗೊಂಡು ಫೆ.18ರ ವರೆಗೆ ಪ್ರತೀ ದಿನ ಉತ್ಸವ ಬಲಿ ನಡೆಯಲಿದೆ. ಫೆ. 18ರಂದು ಮಹಾರಥೋತ್ಸವ ಸಂಪನ್ನಗೊಳ್ಳಲಿದೆ.
ಪ್ರತೀ ದಿನ ಸಂಜೆ 7 ಗಂಟೆಗೆ ಉತ್ಸವ ಬಲಿ ಆರಂಭಗೊಳ್ಳಲಿದ್ದು, ವೈವಿಧ್ಯಮಯ ನೃತ್ಯ ಬಲಿ ಮೂಲಕ ಶ್ರೀ ಜನಾರ್ದನ ದೇವರ ಉತ್ಸವ ಬಲಿ ಭಕ್ತಾದಿಗಳ ಕಣ್ಮನ ಸೆಳೆಯುತ್ತದೆ.
Kshetra Samachara
04/02/2022 01:24 pm