ಉಡುಪಿ: ಗೌರಿಗದ್ದೆ ಶ್ರೀದತ್ತಾಶ್ರಮದ ಅವಧೂತ ವಿನಯ ಗುರೂಜಿ ಅವರು ಉಡುಪಿ ಕವಿ ಮುದ್ದಣ ಮಾರ್ಗದಲ್ಲಿರುವ ಶ್ರೀಜಗದ್ಗುರು ನಿತ್ಯಾನಂದ ಮಂದಿರ ಮಠಕ್ಕೆ ಭೇಟಿ ನೀಡಿದರು. ಸದ್ಗರು ನಿತ್ಯಾನಂದರ ದರ್ಶನ ಪಡೆದು, ಆರತಿ ಬೆಳಗಿಸಿದರು. ಗುರೂಜಿ ಅವರನ್ನು ಮಂದಿರದ ಆಡಳಿತ ಮಂಡಳಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಂದಿರ ಮಠದ ಕಾರ್ಯಾಧ್ಯಕ್ಷ ತೋಟದಮನೆ ದಿವಾಕರ್ ಶೆಟ್ಟಿ ಕೊಡವೂರು, ಕೋಶಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಬನ್ನಂಜೆ, ಪ್ರಧಾನ ಕಾರ್ಯದರ್ಶಿ ಪಾಂಗಾಳ ಯೋಗೀಶ್ ಶಾನಭೋಗ್, ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ ಕೊರಂಗ್ರಪಾಡಿ, ಮಹಾಬಲ ಕುಂದರ್, ತಾರಾನಾಥ್ ಮೇಸ್ತ ಶಿರೂರು, ಸಂತೋಷ್ ನಾಯರ್ ಕುಕ್ಕೂಂದೂರು. ಗೌರಿಗದ್ದೆ ಶ್ರೀದತ್ತಾಶ್ರಮದ ಶಿಷ್ಯರು, ನಿತ್ಯಾನಂದ ಸ್ವಾಮೀಜಿಯವರ ಭಕ್ತರು ಉಪಸ್ಥಿತರಿದ್ದರು.
Kshetra Samachara
31/01/2022 05:00 pm