ಕಟೀಲು: ಮಲ್ಲಿಗೆಯಂಗಡಿ ಶ್ರೀ ವನದುರ್ಗಾ ಪ್ರಕೃತಿ ಅನಂತೇಶ್ವರ ಗುರು ದೇವಸ್ಥಾನದಲ್ಲಿ ಶಿಖರ ಪ್ರತಿಷ್ಠೆ ಮತ್ತು ಪ್ರಕೃತಿ ಪೂಜೆ ಬುಧವಾರ ನಡೆಯಿತು.
ಗಣಹೋಮ ನಂತರ ಶಿಖರ ಪ್ರತಿಷ್ಠಿ, ಆಶ್ಲೇಷ ಪೂಜೆ, ಮದ್ಯಾಹ್ನ ಮಂಗಳಾರತಿ ನಂತರ ಪಲ್ಲ ಪೂಜೆ ನಡೆದು ಅನ್ನ ಸಂತರ್ಪಣೆ ನಡೆಯಿತು.
ಶಿಬರೂರು ವೆಂಕಟರಮಣ ಆಚಾರ್ಯ ರವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕ್ಷೇತ್ರದ ಆಡಳಿತ ಮುಖ್ಯಸ್ಥ ಸುರೇಶ್ ಮಲ್ಲಿಗೆಯಂಗಡಿ ಉಪಸ್ತಿತರಿದ್ದು, ದೈವಜ್ಜರಾದ ನರಸಿಂಹ ಕಾಮತ್, ಈಶ್ವರ ಕಟ್ಟೆ,, ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಸ್ಥಳೀಯ ಜನಪ್ರತಿನಿಧಿಗಳು, ಭಕ್ತರು ಭೇಟಿ ನೀಡಿದರು.
Kshetra Samachara
26/01/2022 07:04 pm