ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಯಡ್ತರೆಯಲ್ಲಿ ಗೆಂಡ ಸೇವೆ ನಡೆಯಿತು. ಯಡ್ತರೆ ನಾಗರಕಟ್ಟೆಯ ಪಂಜುರ್ಲಿ ನೇಮೋತ್ಸವ ನಡೆಯುತ್ತಿದ್ದು, ನೇಮೋತ್ಸವ ಅಂಗವಾಗಿ ಗೆಂಡ ಸೇವೆ ಕೂಡ ಪ್ರತಿ ವರ್ಷ ನಡೆಯುತ್ತದೆ. ಮೊದಲು ಪಂಜುರ್ಲಿ ದೈವ ನರ್ತಿಸುತ್ತಾ ಆವೇಶ ಭರಿತವಾಗಿ ಗೆಂಡ ಸೇವೆ ಆರಂಭಿಸಿತು. ಬಳಿಕ ನೇಮೋತ್ಸವಕ್ಕೆ ಬಂದ ಭಕ್ತರು ಗೆಂಡವನ್ನು ತುಳಿದು ತಮ್ಮ ಹರಕೆ ತೀರಿಸಿದರು. ಯಡ್ತರೆ ಗೆಂಡ ಸೇವೆ ಬೈಂದೂರಿನಲ್ಲೇ ವಿಶೇಷವಾಗಿದ್ದು, ಭಕ್ತರು ಕಷ್ಟ ಕಾಲದಲ್ಲಿ ಹಾಗೂ ಇಷ್ಟಾರ್ಥ ಸಿದ್ದಿಗಾಗಿ ಗೆಂಡ ಸೇವೆ ಹರಕೆ ಹೊತ್ತು ನೇಮೋತ್ಸವದಂದು ಗೆಂಡಸೇವೆ ಹರಕೆ ತೀರಿಸುತ್ತಾರೆ.ನೂರಾರು ಭಕ್ತರು ಭಕ್ತಿ ಶ್ರದ್ಧೆಯಿಂದ ಇದರಲ್ಲಿ ಪಾಲ್ಗೊಂಡು ಪುನೀತರಾದರು.
Kshetra Samachara
26/01/2022 10:52 am