ಮುಲ್ಕಿ: ಮುಲ್ಕಿ ಸಮೀಪದ ಮಾನಂಪಾಡಿ ಶ್ರೀ ಧೂಮಾವತಿ ಜಾರಂದಾಯ ಮತ್ತು ಪರಿವಾರ ದೈವಗಳ ವರ್ಷಾವಧಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು ಜ. 16 ಭಾನುವಾರ ದೇವಸ್ಥಾನದಲ್ಲಿ ಬೆಳಿಗ್ಗೆ ಚಪ್ಪರ ಮುಹೂರ್ತ ನಡೆದು 11 ಗಂಟೆಗೆ ಭಂಡಾರ ಮನೆಯಿಂದ ಧರ್ಮದೈವಗಳ ದರ್ಶನದೊಂದಿಗೆ ಭಂಡಾರ ಬರುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ ಮೈಸಂದಾಯ ಹಾಗೂ ಜಾರಂದಾಯ ನೇಮೋತ್ಸವ ನಡೆಯಿತು.ಜ. 17 ಸೋಮವಾರ ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ರಾತ್ರಿ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ವರ್ಷಾವಧಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ಅರ್ಚಕ ರಾಘವೇಂದ್ರ ಭಟ್, ಕೃಷ್ಣಪ್ಪ ಎಸ್ ಸನಿಲ್, ದಿನೇಶ್ ಹೆಗ್ಡೆ, ಭೋಜ ಶೆಟ್ಟಿ ,ಸಂತೋಷ್ ಶೆಟ್ಟಿ, ನವೀನ್ ಶೆಟ್ಟಿ, ರವೀಂದ್ರ ಸತೀಶ್ ಮಾನಂಪಾಡಿ, ಮಿತ್ರವೃಂದ ಹಾಗೂ ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು
ಜ. 18 ಮಂಗಳವಾರ ಬೆಳಗ್ಗೆ ಮಾಯಂದಾಲ ನೇಮೋತ್ಸವ ಹಾಗೂ ಭಂಡಾರ ನಿರ್ಗಮನ ನಡೆಯಲಿದೆ.
Kshetra Samachara
18/01/2022 11:10 am