ಉಡುಪಿ: ಶ್ರೀ ಕೃಷ್ಣನಗರಿಯಲ್ಲಿ ಪರ್ಯಾಯ ಮಹೋತ್ಸವ ಖುಷಿ- ಸಂಭ್ರಮ. ಕೋವಿಡ್ ನಿಯಮಾವಳಿ ನಡುವೆಯೇ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಿದರು.
ಈ ಬಾರಿ ಕೃಷ್ಣಾಪುರ ಪರ್ಯಾಯ ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿತ್ತು. 50ಕ್ಕೂ ಅಧಿಕ ಟ್ಯಾಬ್ಲೋ ರದ್ದು ಮಾಡಲಾಗಿತ್ತು.ಇದೇ ಮೊದಲ ಬಾರಿಗೆ ಕೇವಲ ಏಳು ಟ್ಯಾಬ್ಲೋ, ಚೆಂಡೆ, ಶಂಖ, ಡೋಲು, ಪಂಚವಾದ್ಯ ಪರ್ಯಾಯದ ಅದ್ಧೂರಿ ಮೆರವಣಿಗೆಗೆ ಸಾಕ್ಷಿಯಾದವು.
ವಾಹನ ಪಲ್ಲಕ್ಕಿಯಲ್ಲಿ ಅಷ್ಟ ಮಠಾಧೀಶರ ಮೆರವಣಿಗೆ ನಡೆಯಿತು. ಪಲಿಮಾರು, ಪೇಜಾವರ, ಕಾಣಿಯೂರು, ಸೋದೆ, ಶಿರೂರು ಶ್ರೀಗಳು ಜೋಡುಕಟ್ಟೆಯಿಂದ ರಥಬೀದಿವರೆಗೆ ಸಾಗಿಬಂದರು.ಮುಂಜಾನೆ ರಸ್ತೆ ಇಕ್ಕೆಲ ನಿಂತು ಭಕ್ತಜನರು ಮೆರವಣಿಗೆ ವೀಕ್ಷಿಸಿದರು. ಮೆರವಣಿಗೆ ಶ್ರೀಕೃಷ್ಣಮಠಕ್ಕೆ ಸಾಗಿಬಂದ ಬಳಿಕ ಪೀಠಾರೋಹಣದ ನಾನಾ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು.
PublicNext
18/01/2022 10:55 am