ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದುಷ್ಕೃತ್ಯ ವಿರುದ್ಧ ವಿಎಚ್ ಪಿಯಿಂದ ದೇವಸ್ಥಾನಗಳಲ್ಲಿ ಪ್ರಾರ್ಥನೆ

ಮಂಗಳೂರು: ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಅಪವಿತ್ರಗೊಳಿಸಿರುವುದು, ಹಿಂದೂ ದೈವ - ದೇವರುಗಳನ್ನು ಅಶ್ಲೀಲವಾಗಿ ಚಿತ್ರಿಸಿರುವುದನ್ನು ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್, ಕರಾವಳಿಯ ದೈವಸ್ಥಾನ- ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿತು. ಈ ಹಿನ್ನೆಲೆಯಲ್ಲಿ ಕದ್ರಿ ಶ್ರೀ ಮಂಜುನಾಥ ದೇವಾಲಯದಲ್ಲಿಯೂ ಪ್ರಾರ್ಥನೆ ನೆರವೇರಿಸಲಾಯಿತು.

ಶ್ರೀ ಕೊರಗಜ್ಜ ದೈವದ ಕಾಣಿಕೆ ಡಬ್ಬಿಗೆ ಕಾಂಡೋಮ್ ಹಾಕಿ ಅಪವಿತ್ರತೆ, ಶ್ರೀ ಕೊರಗಜ್ಜನ ವೇಷ-ಭೂಷಣ ಧರಿಸಿ ಅವಹೇಳನ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೈವ- ದೇವರುಗಳನ್ನು ಅಶ್ಲೀಲವಾಗಿ ಚಿತ್ರಿಸಿರುವುದು ಇತ್ಯಾದಿ ನಿರಂತರವಾಗಿ ನಡೆಸುತ್ತಿರುವ ಹೀನ ಬುದ್ಧಿಯವರ ದುಷ್ಕೃತ್ಯ ಖಂಡಿಸಿ ವಿಎಚ್ ಪಿ, ಕರಾವಳಿಯ ದೈವಸ್ಥಾನ- ದೇವಸ್ಥಾನ, ಭಜನಾ ಮಂದಿರ ಸೇರಿದಂತೆ 1000 ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಗುರಿಯನ್ನು ಹೊಂದಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶ್ರೀ ಮಂಗಳಾದೇವಿ, ಕದ್ರಿ, ಶರವು, ಕಟೀಲು, ಪೊಳಲಿ, ಬಪ್ಪನಾಡು, ಉರ್ವಾ, ಪುತ್ತೂರು, ವಿಟ್ಲ, ಪಣೋಲಿಬೈಲು ಸಹಿತ ಕುತ್ತಾರು, ಪದಂಗಡಿ ಶ್ರೀ ಕೊರಗಜ್ಜನ ಕ್ಷೇತ್ರಗಳಲ್ಲಿಯೂ ಸಾಮೂಹಿಕ ಪ್ರಾರ್ಥನೆ ಮಾಡಿ ಈ ರೀತಿ ತಿಳಿಗೇಡಿತನದ ದುಷ್ಕೃತ್ಯ ಎಸಗುವವರಿಗೆ ಸದ್ಬುದ್ಧಿ ಕರುಣಿಸಲೆಂದು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಅಲ್ಲದೆ ಗೋವು, ಸ್ತ್ರೀಯರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಸದಾ ಸಂರಕ್ಷಣೆ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.

Edited By : Manjunath H D
Kshetra Samachara

Kshetra Samachara

11/01/2022 02:04 pm

Cinque Terre

26.7 K

Cinque Terre

1

ಸಂಬಂಧಿತ ಸುದ್ದಿ