ಪುನರೂರು: ಮುಲ್ಕಿ ಸಮೀಪದ ಪುನರೂರು ಶ್ರೀ ಬ್ರಹ್ಮಮುಗೇರ ದೈವಸ್ಥಾನದಲ್ಲಿ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಜ. 4 ಮಂಗಳವಾರ ಪ್ರಾತಃಕಾಲ ವಿಶೇಷ ಪ್ರಾರ್ಥನೆ, ಸ್ಥಳಶುದ್ಧಿ ,ಗಣಹೋಮ ಆಗಮನ ಕಾರ್ಯಕ್ರಮ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಮಧ್ಯಾಹ್ನ 1:00 ಗಂಟೆಗೆ ಶ್ರೀ ಧರ್ಮರಸು ಉಳ್ಳಾಯ ದೈವದ ನೇಮೋತ್ಸವ, ಬಳಿಕ ಮಹಾಕಾಳಿ ದೈವದ ನೇಮೋತ್ಸವ, ಹರಕೆ, ಕಾಣಿಕೆ ಸ್ವೀಕಾರ ಪ್ರಸಾದ ವಿತರಣೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭ ಪುನರೂರು ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಅವಿನಾಶ್ ಶೆಟ್ಟಿ, ದೇವಪ್ರಸಾದ್ ಪುನರೂರು, ವಿಶ್ವನಾಥ್ ರಾವ್, ಗೋಪಿನಾಥ ರಾವ್, ರಾಘವೇಂದ್ರರಾವ್ ಕೆರೆಕಾಡು, ದೈವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಬುಧವಾರ ಸಂಜೆ ಶ್ರೀ ಬ್ರಹ್ಮಮುಗೇರ ದೈವಗಳ ಹಾಗೂ ತನ್ನಿಮಾನಿಗ ದೈವದ ನೇಮೋತ್ಸವ ಪ್ರಸಾದ ವಿತರಣೆ, ಗುರುವಾರ ಅಲೇರ ಪಂಜುರ್ಲಿ ದೈವದ ನೇಮೋತ್ಸವ, ಶುಕ್ರವಾರ ಭಂಡಾರ ನಿರ್ಗಮನ ಕಾರ್ಯಕ್ರಮ ನಡೆಯಲಿದೆ.
Kshetra Samachara
05/01/2022 09:32 am