ಉಡುಪಿ: ವಾರದ ಹಿಂದೆ ಉಡುಪಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ವಿವಾದ ಕಾಣಿಸಿಕೊಂಡಿತ್ತು.ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರಲು ಅನುಮತಿ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದರು.ಮಾತ್ರವಲ್ಲ ,ಹಾಕಿಕೊಂಡು ಬಂದಿದ್ದರು.ಆದರೆ ಕಾಲೇಜು ಆಡಳಿತ ಇದಕ್ಕೆ ಅವಕಾಶ ನೀಡಿರಲಿಲ್ಲ. ಬಳಿಕ ಉಡುಪಿ ಶಾಸಕರು, ಕಾಲೇಜಿನ ಪ್ರಾಂಶುಪಾಲರು ಮತ್ತು ಹೆತ್ತವರು ಸಭೆ ನಡೆಸಿ ಸಭೆಯ ನಿರ್ಣಯವನ್ನು ಪಿಯು ಬೋರ್ಡ್ ಗೆ ಕಳಿಸಲಾಗಿದೆ.
ಅಲ್ಲಿಂದ ಯಾವ ರೀತಿ ಆದೇಶ ಬರುತ್ತದೋ ಅದನ್ನು ಪಾಲಿಸಿವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ.ಈ ಮಧ್ಯೆ ಭಜರಂಗದಳದ ಮುಖಂಡ ಸುನಿಲ್ ಕೆ.ಅರ್,ಹೇಳಿಕೆ ನೀಡಿದ್ದು ,ಕಾಲೇಜಿನಲ್ಲಿ ಸಮಾನತೆ ಕಾಪಾಡುವುದು ಎಲ್ಲ ಧರ್ಮೀಯರ ಕರ್ತವ್ಯ. ಅವರು ಹಿಜಾಬ್ ಧರಿಸಿಯೇ ಬರುವುದಾದರೆ ,ನಮ್ಮ ಮಕ್ಕಳು ಕೇಸರಿ ಶಲ್ಯ ಧರಿಸಿಕೊಂಡು ಬರಲಿದ್ದಾರೆ ಎಂದು ಹೇಳಿದ್ದಾರೆ.
PublicNext
04/01/2022 04:35 pm