ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದವನಿಗೆ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಬಜರಂಗ ದಳ

ಮಂಗಳೂರು: ನಗರದ ಮಾರ್ನಮಿಕಟ್ಟೆಯಲ್ಲಿರುವ ಶ್ರೀ ಕೊರಗಜ್ಜನ ಕಟ್ಟೆ ಸೇರಿದಂತೆ 18 ದೇವಸ್ಥಾನ, ದೈವಸ್ಥಾನ, ಮಸೀದಿಗಳ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆದು ಜೈಲು ಪಾಲಾದ ಆರೋಪಿ ದೇವದಾಸ್ ದೇಸಾಯಿಗೆ ಬಜರಂಗದಳವು ಬ್ಯಾನರ್ ಹಾಕಿ ಶ್ರದ್ಧಾಂಜಲಿ ಅರ್ಪಿಸಿದೆ.

ಮಂಗಳೂರಿನ ಹೊರವಲಯದಲ್ಲಿರುವ ಬೀರಿ ಜಂಕ್ಷನ್ ನಲ್ಲಿ ಬ್ಯಾನರ್ ಹಾಕಿರುವ ಮಾಡೂರು ಬಜರಂಗದಳ ಶಾಖೆಯು, ಆರೋಪಿ ದೇವದಾಸ್ ದೇಸಾಯಿ ಎಂಬ ಹೆಸರನ್ನು ಡೇವಿಡ್ ದೇಸಾಯಿ ಎಂದು ನಾಮಾಂತರ ಮಾಡಿ ಶ್ರದ್ಧಾಂಜಲಿ ಬ್ಯಾನರ್ ಹಾಕಿದೆ.

ಕ್ರಿಶ್ಚಿಯನ್ ಧರ್ಮಾನುಯಾಯಿಯಾಗಿದ್ದ ದೇವದಾಸ್ ದೇಸಾಯಿ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜೈಲು ಪಾಲಾಗಿದ್ದಾನೆ. ಆದರೆ, ಆತ ಜೀವಂತ ಇರುವಾಗಲೇ ಶ್ರದ್ಧಾಂಜಲಿ ಬ್ಯಾನರ್ ಹಾಕಿ 'ಮತ್ತೆಂದೂ ಹುಟ್ಟಿ ಬರಬೇಡ ಈ ಪವಿತ್ರ ಭಾರತದ ಮಣ್ಣಿನಲ್ಲಿ. ಮತಾಂತರಿ ಮಿಷನರಿಗಳೇ ನಿಮ್ಮ ಮತ ಪ್ರಚಾರಕ್ಕಾಗಿ ಸನಾತನ ಧರ್ಮದ ದೈವ- ದೇವರುಗಳನ್ನು ನಿಂದಿಸಬೇಡಿ‌. ನಿಮ್ಮಂತಹ ಅಧರ್ಮೀಯರ ನಾಶ ಈ ಮಣ್ಣಿನಲ್ಲಿ ಖಡಾ ಖಂಡಿತ. ಕ್ರಿಸ್ತನ ಬೇಳೆ ಬೇಯದು, ಈ ಕೃಷ್ಣನ ನಾಡಿನಲ್ಲಿ'' ಎಂದು ಬರೆಯಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

31/12/2021 08:30 pm

Cinque Terre

12.3 K

Cinque Terre

6