ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಮಹೋತ್ಸವ ಜರುಗಿತು.ಇಂದು ಬೆಳಗ್ಗೆ 6.58ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ರಥಾರೂಢರಾಗಿ ಸಹಸ್ರಾರು ಭಕ್ತರಿಗೆ ದರ್ಶನವಿತ್ತರು.
ಬ್ರಹ್ಮ ರಥೋತ್ಸವ ಮುನ್ನ ವಿವಿಧ ವೈದಿಕ ಕಾರ್ಯ ಹಾಗೂ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಮಹಾಪೂಜೆ ಬಳಿಕ ಬ್ರಹ್ಮ ರಥೋತ್ಸವ ನಡೆಯಿತು. ಶ್ರೀ ಸುಬ್ರಹ್ಮಣ್ಯ ದೇವರು ಬ್ರಹ್ಮ ರಥದಲ್ಲಿ, ಶ್ರೀ ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಆರೂಢರಾದ ಬಳಿಕ ಪಂಚಮಿ ತೇರನ್ನು ಎಳೆಯಲಾಯಿತು.ರಾಜ್ಯದ ಅತ್ಯಂತ ದೊಡ್ಡ ರಥಗಳಲ್ಲಿ ಶ್ರೀ ಸುಬ್ರಹ್ಮಣ್ಯ ಬ್ರಹ್ಮರಥವೂ ಒಂದಾಗಿದೆ.
Kshetra Samachara
09/12/2021 10:57 am