ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಶನಿವಾರ ರಾತ್ರಿ ದೀಪೋತ್ಸವದ ಭಕ್ತಿ ಸಂಭ್ರಮ ಜರುಗಿತು.
ನಿನ್ನೆ ಬೆಳಿಗ್ಗೆ ಪ್ರಾರ್ಥನೆ, ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಭಜನಾಮೃತ, ಶ್ರೀ ದೇವರಿಗೆ ರಂಗಪೂಜೆ, ದೀಪಾರಾಧನೆ ಹಾಗೂ ತುಳಸಿ ಸಂಕೀರ್ತನೆ ನಡೆಯಿತು. ಬಳಿಕ ಅರ್ಚಕ ಶಶಾಂಕ್ ಪುನರೂರು ನೇತೃತ್ವದಲ್ಲಿ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ರಾವ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ವಿಪ್ರ ಸಂಪದ ಅಧ್ಯಕ್ಷ ಸುಧಾಕರ್ ಪುನರೂರು, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್, ವಿಶ್ವನಾಥ ರಾವ್, ಗೋಪಿನಾಥ ರಾವ್, ರಾಘವೇಂದ್ರರಾವ್ ಕೆರೆಕಾಡು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/12/2021 08:21 am