ಮುಲ್ಕಿ: ಇತಿಹಾಸ ಪ್ರಸಿದ್ಧ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಇಂದು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಅರ್ಚಕ ಶ್ರೀಪತಿ ಉಪಾಧ್ಯಾಯ ಪ್ರಸಾದ ನೀಡಿ, ಹರಸಿದರು.
ಈ ಸಂದರ್ಭ ಸುನಿಲ್ ಶೆಟ್ಟಿ ಮಾತನಾಡಿ, ತಮ್ಮ ಪುತ್ರ ಆಹನ್ ಶೆಟ್ಟಿಯ ಹಿಂದಿ ಚಲನಚಿತ್ರ ಡಿಸೆಂಬರ್ 3ರಂದು ಬಿಡುಗಡೆಯಾಗಲಿದ್ದು, ಯಶಸ್ವಿಯಾಗಲು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಚಿತ್ರರಂಗದ ಅಭಿಮಾನಿಗಳು ಚಲನಚಿತ್ರ ನೋಡಿ, ಪ್ರೋತ್ಸಾಹ ನೀಡಲು ವಿನಂತಿಸಿದರು.
ಉದ್ಯಮಿ ದೇವಾನಂದ ಶೆಟ್ಟಿ , ಗೋಪಾಲಕೃಷ್ಣ ಭಟ್, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/11/2021 03:10 pm