ಸುಬ್ರಹ್ಮಣ್ಯ: ವಿಶ್ವ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠಿ ಮಹೋತ್ಸವ 01-12-2021ರಿಂದ ದಿನಾಂಕ 15-12-2021ರ ವರೆಗೆ ನಡೆಯಲಿದೆ.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ನಡೆದು ಬರುತ್ತಿರುವ ಚಂಪಾಷಷ್ಠಿ ಮಹೋತ್ಸವ ಇದೇ ಪ್ಲವ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಬುಧವಾರ 01-12-2021 ರಿಂದ ಮಾರ್ಗಶಿರ ಶುದ್ಧ ದ್ವಾದಶಿ ಬುಧವಾರ ದಿನಾಂಕ 15-12-2021ರ ವರೆಗೆ ಈ ಕೆಳಗಿನ ವಿವರದಂತೆ ವಾರ್ಷಿಕ ಜಾತ್ರಾ ಉತ್ಸವಾದಿ ಭಗವತ್ಸಂಕಲ್ಪ ಪ್ರಕಾರ ನಡೆಯಲಿದೆ.
01-12-2021 ಬುಧವಾರ ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ 02-12-2021 ಗುರುವಾರ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ ಲಕ್ಷದೀಪೋತ್ಸವ ಶೇಷವಾಹನೋತ್ಸವ, 03-12-2021 ಶುಕ್ರವಾರ 04-12-2021 ಶನಿವಾರ 05-12-2021 ಆದಿತ್ಯವಾರ ಅಶ್ವವಾಹನೋತ್ಸವ.
06-12-2021 ಸೋಮವಾರ ಮಯೂರ ವಾಹನೋತ್ಸವ. 07-12-2021 ಮಂಗಳವಾರ ರಾತ್ರಿ ಹೂವಿನ ತೇರಿನ ಉತ್ಸವ. 08-12-2021 ಬುಧವಾರ ತೈಲಾಭ್ಯಂಜನ, ರಾತ್ರಿ ಪಂಚಮಿ ರಥೋತ್ಸವ.
09-12-2021 ಗುರುವಾರದಂದು ಪ್ರಾತಃ ಕಾಲದಲ್ಲಿ ಚಂಪಾಷಷ್ಠಿಯ ಮಹಾರಥೋತ್ಸವ.
10-12-2021 ಶುಕ್ರವಾರ ಅವಧೃತೋತ್ಸವ ಮತ್ತು ನೌಕಾವಿಹಾರ. 15-12-2021 ಬುಧವಾರ ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ ನಡೆಯಲಿದೆ.
ದಿನಾಂಕ 30-11-2021 ಮಂಗಳವಾರ "ಮೂಲಮೃತ್ತಿಕಾ " ಪ್ರಸಾದ ವಿತರಣೆ ನಡೆಯಲಿದೆ. ಕಿರುಷಷ್ಠಿ ಮಹೋತ್ಸವವು ದಿನಾಂಕ 08-01-2022 ರಂದು ಜರುಗುವುದು. ದಿನಾಂಕ 01-12-2021 ರಿಂದ 03-12-2021ರ ವರೆಗೆ ಭಕ್ತಾದಿಗಳು ದೇಗುಲಕ್ಕೆ ಒಪ್ಪಿಸುವ ಹಸಿರು ಕಾಣಿಕೆಗಳನ್ನು ಸ್ವೀಕರಿಸಲಾಗುವುದು.
Kshetra Samachara
28/11/2021 01:09 pm