ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಪೇಜಾವರ ಶ್ರೀಗಳ ಬೃಂದಾವನಕ್ಕೆ ತೆರಳಿ ಹಂಸಲೇಖ ಕ್ಷಮೆ ಯಾಚಿಸಲಿ"

ಮಂಗಳೂರು: ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿರುವ ಸಂಗೀತ ನಿರ್ದೇಶಕ ಹಂಸಲೇಖ ಬೆಂಗಳೂರಿನಲ್ಲಿರುವ ಪೇಜಾವರ ಶ್ರೀಗಳ ಬೃಂದಾವನಕ್ಕೆ ತೆರಳಿ ಕ್ಷಮೆ ಯಾಚಿಸಲಿ ಎಂದು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಆಗ್ರಹಿಸಿದ್ದಾರೆ.

ಹಂಸಲೇಖ ಮಾತಿನ ಭರದಲ್ಲಿ ಬೃಂದಾವನಸ್ಥರಾದ ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿ ಸಮಾಜದ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಶ್ರೀಗಳಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಲಭ್ಯವಾಗಿದ್ದು, ಸರ್ವ ಜನರೂ ಅದನ್ನು ಜಾತಿ ಬೇಧವಿಲ್ಲದೆ ಸಂಭ್ರಮಿಸಿದ್ದರು. ಈ ಸಂದರ್ಭ ಅವರು ಇಲ್ಲಸಲ್ಲದ ಹೇಳಿಕೆ ‌ನೀಡಿರೋದು ಸರಿಯಲ್ಲ.

ಸಂವಿಧಾನಾತ್ಮಕವಾಗಿ ಅವರಿಗೆ ಯಾವ ಶಿಕ್ಷೆ ದೊರಕುತ್ತದೋ ನಮಗೆ ಗೊತ್ತಿಲ್ಲ. ಅದರ ಬಗ್ಗೆ ನಮಗೇನು ತಕರಾರಿಲ್ಲ. ಆದರೆ, ಜನರ ಭಾವನೆಗಳ ಧ್ವನಿಯಾಗಿ ಹೇಳುವುದೇನೆಂದರೆ ಹಂಸಲೇಖ ಬೆಂಗಳೂರಿನಲ್ಲಿರುವ ವಿದ್ಯಾಪೀಠದ ಪೇಜಾವರ ಶ್ರೀಗಳ ಬೃಂದಾವನಕ್ಕೆ ತೆರಳಿ ಕ್ಷಮೆ ಯಾಚಿಸಬೇಕು ಎಂದು ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

Edited By : Shivu K
Kshetra Samachara

Kshetra Samachara

16/11/2021 02:18 pm

Cinque Terre

8.17 K

Cinque Terre

2

ಸಂಬಂಧಿತ ಸುದ್ದಿ