ಕಾಪು : ಕಟುಕರ ಕೈಯಿಂದ ಪೊಲೀಸರ ಕೈಗೆ ಸಿಕ್ಕ ಗೋವುಗಳ ಪೈಕಿ ಜೀವನ್ಮರಣ ಹೋರಾಟದಲ್ಲಿದ್ದ ಎತ್ತುವಿಗೆ ಮರುಜನ್ಮ ನೀಡಿದ ಸಂಘಪರಿವಾರದ ಸದಸ್ಯರು ಇದೀಗ ಗೋವು ಪೂಜೆ ನಡೆಸುವ ಮೂಲಕ ಯಶಸ್ವಿ ಧಾರ್ಮಿಕ ಕಾರ್ಯವೊಂದರಲ್ಲಿ ಸುದ್ಧಿಯಾಗಿದ್ದಾರೆ.
ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಿಂದ ಕೇರಳಕ್ಕೆ ಟ್ರಕ್ ವೊಂದರಲ್ಲಿ ವ್ಯವಸ್ಥಿತವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪಡುಬಿದ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಇದರಲ್ಲಿ ಒಂದು ಎತ್ತು ಮೃತ ಪಟ್ಟಿದ್ದು ಮತ್ತೊಂದು ಜೀವನ್ಮರಣ ಹೋರಾಟದಲ್ಲಿದ್ದ ಎತ್ತುವಿನ ಆರೈಕೆಗೆ ಪಣತೊಟ್ಟ ಸಂಘ ಪರಿವಾರ ಹಾಗೂ ಸ್ಥಳೀಯ ಯುವಕರ ದಂಡು ಹಗಲು ರಾತ್ರಿ ಎನ್ನದೆ ಆರೈಕೆ ನಡೆಸಿ ಬಹುತೇಕ ಅರವತ್ತು ಶೇಕಡ ಗುಣಮುಖದ ಹಂತದಲ್ಲಿರುವ ಈ ಎತ್ತನ್ನು ಇಂದು ಮುಂಜಾನೆ ಸ್ನಾನ ಮಾಡಿಸಿ ಧಾರ್ಮಿಕ ವಿಧಿವಿದಾನಗಳೊಂದಿಗೆ ಸ್ಥಳೀಯ ಇತರೆ ಗೋವುಗಳನ್ಜು ಸೇರಿಸಿ ಪೂಜೆ ನಡೆಸಲಾಯಿತು.
ಈ ಬಗ್ಗೆ ಮಾತನಾಡಿದ ಧಾರ್ಮಿಕ ವಿಧಿ ನಡೆಸಿದ ಜೋಯಿಸರು, ಸಾವಿನ ಅಂಚಿನಲ್ಲಿದ್ದ ಗೋವು ಒಂದಕ್ಕೆ ಹೊಸ ಬದುಕು ನೀಡಿದ ಕೀರ್ತಿ ಪರಿವಾರ ಸಂಘಟನೆಯ ಯುವಕರಿಗೆ ಸಲ್ಲುತ್ತದೆ, ಈ ದಿನ ಕೃಷ್ಣ ನಿಗೆ ಪ್ರೀಯವಾದ ಗೋವು ಪೂಜೆ ನಡೆಸುವ ಮೂಲಕ ಕೋಟಿ ಕೋಟಿ ದೇವತೆಗಳ ಆಶೀರ್ವಾದ ನಿಮಗಿದೆ. ಅನ್ಯಾಯವಾಗಿ ಈ ಜಾನುವಾರುಗಳ ನೋವಿಗೆ ಕಾರಣವಾದ ಕಟುಕರಿಗೆ ಕಾನೂನು ಶ್ರೀಘ್ರವಾಗಿ ಶಿಕ್ಷೆ ನೀಡುವಂತ್ತಾಗಲೆಂದರು.
ಈ ಸಂದರ್ಭ ಸಂಘಟನೆಯ ಪ್ರಮುಖರಾದ ರಾಜೇಶ್ ಕೋಟ್ಯಾನ್, ಮನೋಜ್ ಅಬ್ಬೇಡಿ, ಅಭಿನಂದನ್ ಪಡುಬಿದ್ರಿ, ಮನೋಹರ್, ಪ್ರಸಾದ್, ಗಣಿ, ವಿನೋದ್, ನೀತಾ ಗುರುರಾಜ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/11/2021 01:38 pm