ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಭಕ್ತಿ ಶ್ರದ್ಧೆಯ ನವರಾತ್ರಿ ಉತ್ಸವ ಸಂಪನ್ನ

ಕೊಲ್ಲೂರು: ದಕ್ಷಿಣ ಭಾರತದ ಪ್ರಸಿದ್ಧ ದೇವಿ ದೇಗುಲ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಮೂಕಾಂಬಿಕಾ ದೇವಸ್ಥಾನದ ಪ್ರಾಂಗಣದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟು ಉತ್ಸವ ಮಾಡಲಾಯಿತು. ಬೆಳಗ್ಗೆ ಚಂಡಿಕಾಹೋಮ ನಡೆದಿದ್ದು ರಾತ್ರಿ ಮೇಷ ಲಗ್ನದಲ್ಲಿ ದೇವಿಯ ಉತ್ಸವ ಶಾಸ್ತ್ರೋಕ್ತವಾಗಿ ನಡೆಯಿತು. ಕೋವಿಡ್ ಮಾರ್ಗಸೂಚಿ ಇರುವ ಕಾರಣ ಸಾವಿರಾರು ಜನ ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿಲ್ಲ.

ದೇವಸ್ಥಾನದ ಸುತ್ತಮುತ್ತಲ ಗ್ರಾಮಸ್ಥರು, ಸಿಬ್ಬಂದಿಗಳು, ಅರ್ಚಕರ ಕುಟುಂಬ ಆಡಳಿತಮಂಡಳಿ ಕುಟುಂಬ ಮತ್ತು ಸೇವಾ ಸಿಬ್ಬಂದಿಗಳು ಮಾತ್ರ ಪಾಲ್ಗೊಂಡಿದ್ದರು.

Edited By : Shivu K
Kshetra Samachara

Kshetra Samachara

15/10/2021 09:57 am

Cinque Terre

10.57 K

Cinque Terre

0

ಸಂಬಂಧಿತ ಸುದ್ದಿ