ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಪ್ಪನಾಡು ದೇವಸ್ಥಾನದಲ್ಲಿ 2 ಸಾವಿರಕ್ಕೂ ಅಧಿಕ ವಾಹನಗಳಿಗೆ ಆಯುಧ ಪೂಜೆ

ಮುಲ್ಕಿ: ಶರನ್ನವರಾತ್ರಿ ಭಕ್ತಿ ಸಂಭ್ರಮದಲ್ಲಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯುಧ ಪೂಜೆ, ಚಂಡಿಕಾ ಯಾಗ, ಅನ್ನ ಸಂತರ್ಪಣೆ ನಡೆಯಿತು.

ಈ ಸಂದರ್ಭ ಸುಮಾರು 2000ಕ್ಕೂ ಅಧಿಕ ವಾಹನಗಳಿಗೆ ದೇವಸ್ಥಾನದ ಎದುರು ಭಾಗದಲ್ಲಿ ಶಾಸ್ತ್ರೋಕ್ತವಾಗಿ ಆಯುಧ ಪೂಜೆ ನಡೆಯಿತು.

ಶರನ್ನವರಾತ್ರಿ ಮಹಾನವಮಿ ಪ್ರಯುಕ್ತ ದೇವಸ್ಥಾನದಲ್ಲಿ ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಬೆಂಗಳೂರಿನ ವಾರಿಜಾಕ್ಷಿ ಎಂ.ಎಸ್.ರಾಮನ್ ಸೇವಾರ್ಥ ಚಂಡಿಕಾ ಯಾಗ ನಡೆಯಿತು.

ಖ್ಯಾತ ನಾಗಸ್ವರ ವಾದಕ ಬಪ್ಪನಾಡು ನಾಗೇಶ್ ಅವರಿಂದ ನಾಗಸ್ವರ ವಾದನ ನಡೆಯಿತು.

ಮಧ್ಯಾಹ್ನ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸ್ವಯಂಸೇವಕರಾಗಿ ಶ್ರೀ ನವದುರ್ಗಾ ಯುವಕ ವೃಂದ ಕೋಟಕೇರಿ, ಬಪ್ಪನಾಡು ಯುವಕ ವೃಂದದ ಸದಸ್ಯರು ಭಾಗವಹಿಸಿದ್ದರು

ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿ ಭಕ್ತರು ದೇವರ ದರ್ಶನ ಪಡೆದರು.

ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ಅರ್ಚಕ ಶ್ರೀಪತಿ ಉಪಾಧ್ಯಾಯ, ಅಶೋಕ್ ಕುಮಾರ್ ಶೆಟ್ಟಿ, ಕಿಶೋರ್ ಶೆಟ್ಟಿ ಬಪ್ಪನಾಡು, ದೇವಳ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್,ಅಕೌಂಟೆಂಟ್ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

14/10/2021 05:49 pm

Cinque Terre

6.95 K

Cinque Terre

0

ಸಂಬಂಧಿತ ಸುದ್ದಿ