ಉಡುಪಿ: ಪೇಜಾವರ ಮಠದ ಕೀರ್ತಿಶೇಷ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರ ಸವಿನೆನಪಿಗಾಗಿ ಆಯವ್ಯಯದಲ್ಲಿ ರೂ. 2 ಕೋಟಿ ರೂ ಘೋಷಣೆಯಾಗಿದೆ.ಈ ಹಣದಲ್ಲಿ "ಸ್ಮೃತಿ ವನ" ನಿರ್ಮಿಸಲು ಸಂಪೂರ್ಣ ರೂಪುರೇಷೆಗಳ ಬಗ್ಗೆ ಇಂದು ಶಾಸಕ ಕೆ. ರಘುಪತಿ ಭಟ್ ಅವರು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಉಡುಪಿ ವಲಯ ಅರಣ್ಯಾಧಿಕಾರಿಗಳಾದ ಸುಬ್ರಹ್ಮಣ್ಯ, ನಿರ್ಮಿತಿ ಕೇಂದ್ರದ ಅರುಣ್, ಸಚಿನ್, ವಾಸ್ತು ಶಿಲ್ಪಿಗಳಾದ ಸಂಪ್ರೀತ್, ಉಪಸ್ಥಿತರಿದ್ದರು.
Kshetra Samachara
03/10/2021 05:50 pm