ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಾಲ ಸನ್ಯಾಸ ಕುರಿತ ಹೈಕೋರ್ಟ್ ತೀರ್ಪು ಸ್ವಾಗತಿಸಿದ ಪೇಜಾವರ ಶ್ರೀಗಳು

ಉಡುಪಿ: ಶೀರೂರು ಮಠಕ್ಕೆ ಬಾಲ ಸನ್ಯಾಸಿ/ಪೀಠಾಧಿಪತಿ ನೇಮಕ ವಿಚಾರದ ವಿರುದ್ಧದ ಪಿಐಎಲ್ ಅರ್ಜಿಯನ್ನು ಇವತ್ತು ಹೈಕೋರ್ಟ್ ವಜಾಗೊಳಿಸಿದೆ.ಹೈಕೋರ್ಟ್ ತೀರ್ಪನ್ನು ಪೇಜಾವರ ತೀರ್ಥರು ಸ್ವಾಗತಿಸಿದ್ದಾರೆ.ಧಾರ್ಮಿಕ ಗ್ರಂಥದಲ್ಲಿ ಪ್ರೌಢತೆ ವಯಸ್ಸನ್ನು ಹದಿಮೂರರ ಬಳಿಕ ಅಂತ ಗುರುತಿಸಲಾಗಿದೆ.ಹದಿಮೂರರ ಬಳಿಕ ಪ್ರೌಢ ಅಂತ ಮಹಾಭಾರತದಲ್ಲೇ ಉಲ್ಲೇಖ ಇದೆ.ಮೊದಲು ಎಂಟು ವರ್ಷದವರೆಗೆ ಬಾಲ್ಯ ಅಂತ ಇತ್ತು.ನಂತರ ಅಣಿಮಾಂಡವ್ಯ ಋಷಿಗಳು ಅದನ್ನು 13 ವರ್ಷಕ್ಕೆ ವಿಸ್ತಾರ ಮಾಡಿದ್ರು.ಹೀಗಾಗಿ ಧಾರ್ಮಿಕ ನೆಲೆಯಲ್ಲಿ ಹದಿಮೂರು ವರ್ಷ ದಾಟಿದರೆ ಪ್ರೌಢ ಅಂತ ಅರ್ಥ ಎಂದು ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

ಶಿರೂರು ಮಠಕ್ಕೆ ನೇಮಕವಾದ ವ್ಯಕ್ತಿಗೆ ಹದಿಮೂರು ವರ್ಷ ಆಗಿದೆ ಎಂದಿರುವ ಶ್ರೀಗಳು,ಹೀಗಾಗಿ ಧಾರ್ಮಿಕ ನೆಲೆಯಲ್ಲಿ ಇದು ಬಾಲ್ಯ ಸನ್ಯಾಸ ಅಂತ ಆಗುವುದಿಲ್ಲ ಎಂದುಉಡುಪಿಯಲ್ಲಿ ಪೇಜಾವರ ವಿಶ್ವ ಪ್ರಸನ್ನ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

29/09/2021 05:17 pm

Cinque Terre

30.4 K

Cinque Terre

3

ಸಂಬಂಧಿತ ಸುದ್ದಿ