ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನರೂರು: ಲಕ್ಷ ಬಿಲ್ವಾರ್ಚನೆ ಪೂರ್ವ ಸಿದ್ಧತೆ, ಹೊರೆಕಾಣಿಕೆ ಸಮರ್ಪಣೆ

ಮೂಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ತಾನದಲ್ಲಿ ಸೆ. 16 (ಗುರುವಾರ)ರಂದು ಕನ್ಯಾ ಸಂಕ್ರಮಣದ ಶುಭ ಮುಹೂರ್ತದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಭಕ್ತರ ಶ್ರೇಯೋಭಿವೃದ್ಧಿಗಾಗಿ ಪುನರೂರು ವಿಪ್ರ ಸಂಪದದ ಸಹಭಾಗಿತ್ವ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ, ಊರ ಪರವೂರ ಭಕ್ತರ ಸಹಕಾರ ದೊಂದಿಗೆ ವೇದಮೂರ್ತಿ ಕಳತ್ತೂರು ಕರುಣಾಕರ ತಂತ್ರಿಯವರ ನೇತ್ವದಲ್ಲಿ ನಡೆಯುವ ಲಕ್ಷ ಬಿಲ್ವಾರ್ಚನೆ ಮತ್ತು ನೂತನ ಧ್ವಜಸ್ತಂಭದ ತೈಲಾಧಿವಾಸ ಕಾರ್ಯಕ್ರಮಕ್ಕೆ ಪೂರ್ವಸಿದ್ಧತೆಗಳು ನಡೆದಿದ್ದು ದೇವಳದ ಒಳಾಂಗಣದಲ್ಲಿ ಬಿಲ್ವಪತ್ರೆಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ.

ಬೆಳಿಗ್ಗೆ 9ರಿಂದ 11ರವರೆಗೆ ಬಿಲ್ವಾರ್ಚನೆ ಹಾಗೂ ವಿಶೇಷ ಪೂಜೆ ಜರಗಲಿದ್ದು, ಬಳಿಕ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ತೈಲಾಧಿವಾಸ ಕಾರ್ಯಕ್ರಮ ನಡೆಯಲಿದೆ.

ಲಕ್ಷ ಬಿಲ್ವಾರ್ಚನೆ ಅಂಗವಾಗಿ ಕೆರೆಕಾಡು ಗ್ರಾಮಸ್ಥರಿಂದ ಬುಧವಾರ ಪುನರೂರು ದೇವಸ್ಥಾನಕ್ಕೆ ಹೊರೆಕಾಣಿಕೆ ನಡೆಯಿತು.

Edited By : Manjunath H D
Kshetra Samachara

Kshetra Samachara

15/09/2021 10:32 pm

Cinque Terre

6.1 K

Cinque Terre

0

ಸಂಬಂಧಿತ ಸುದ್ದಿ