ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಪೇಜಾವರಶ್ರೀ 34 ನೇ ಚಾತುರ್ಮಾಸ್ಯ ವಿಶೇಷ: ದಲಿತ ಬಡಾವಣೆ ಭೇಟಿ

ಉಡುಪಿ: ಶುಕ್ರವಾರದಂದು ಬೆಂಗಳೂರಿನ ರಾಮಕೃಷ್ಣ ಮಠ ಬಡಾವಣೆಯ ಗವಿಪುರ ಗುಟ್ಟಳ್ಳಿ ಕೆ. ಜಿ ನಗರದ ದಲಿತ ಬಂಧುಗಳ ಬಡಾವಣೆಯಲ್ಲಿ ಹಬ್ಬದ ವಾತಾವರಣ.ತಳಿರು ತೋರಣಗಳಿಂದ ಅಲಂಕರಿಸಲ್ಪಟ್ಟ ಬೀದಿಗಳು,ಕೃಷ್ಣ ವೇಷ ತೊಟ್ಟ ಹತ್ತಾರು ಪುಟಾಣಿಗಳು ,ವಾದ್ಯಮೇಳ. ಹಾದಿಯುದ್ದಕ್ಕೂ ಎರಚಿದ ಹೂವಿನ ಎಸಳುಗಳು... ಇವೆಲ್ಲವೂ ತಮ್ಮ

ಬಡಾವಣೆಯಲ್ಲಿ ಹೆಜ್ಜೆ ಹಾಕುತ್ತಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು , ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಬೆಂಗಳೂರು ರಾಮಕೃಷ್ಣಾಶ್ರಮದ ಪ್ರಮುಖರಾದ ಧರ್ಮರತಾನಂದ ಜೀ ಮತ್ತು ವೀರೇಶಾನಂದ ಜೀ

ಸ್ವಾಮೀಜಿಯವರುಗಳನ್ನು ಆಮಂತ್ರಿಸಲು ಬಡಾವಣೆಯ ನಿವಾಸಿಗಳು ಶ್ರದ್ಧೆಯಿಂದ ಮಾಡಿಕೊಂಡ ವ್ಯವಸ್ಥೆ.

ಸಾಯಂಕಾಲ ಆಗಮಿಸಿದ ಸ್ವಾಮೀಜಿಯವರನ್ನು ಭಕ್ತಿಯಿಂದ ಸ್ವಾಗತಿಸಿದ ಬಡಾವಣೆಯ ನಿವಾಸಿಗಳು ಅಲ್ಲಿನ ಚಂಡಿಕಾದುರ್ಗೆಯ ಮಂದಿರಕ್ಕೆ ಬರಮಾಡಿಕೊಂಡರು.ಮಾತೆಯರು ಸ್ವಾಮೀಜಿಗಳ ಪಾದ ತೊಳೆದು ಹೂಮಳೆಗರೆದು ಸ್ವಾಗತಿಸಿದರು.ಅರ್ಚಕರು ದೇವಿಗೆ ಮಂಗಳಾರತಿ ಬೆಳಗಿದರು.ನಂತರ ಧರ್ಮಸಭೆ ನಡೆಯಿತು. ಸಾಮೂಹಿಕ ರಾಮನಾಮ ಕೃಷಾಷ್ಟಕ ಭಜನೆ ನಡೆಯಿತು.ವಿಶ್ವಹಿಂದುಪರಿಷತ್ ಈ ಕಾರ್ಯಕ್ರಮವನ್ನು ಸಂಯೋಜಿಸಿತ್ತು.

ವಿಹಿಂಪ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ , ವಿಹಿಂಪ ಅಖಿಲ ಭಾರತ ಸಹಪ್ರಧಾನ ಕಾರ್ಯದರ್ಶಿ , ವಿಹಿಂಪ ರಾಜ್ಯಾಧ್ಯಕ್ಷೆ , ಹಿರಿಯ ವೈದ್ಯೆ ಡಾ ವಿಜಯಲಕ್ಷ್ಮೀ ದೇಶಮಾನೆ , ಪ್ರಮುಖರಾದ ವಿಹಿಂಪ ಸಹ ಪ್ರಧಾನ ಕಾರ್ಯದರ್ಶಿ ಸ್ಥಾಣು ಮಾಲಯನ್ , ಸುಬ್ರಹ್ಮಣ್ಯಮ್ , ಮೊದಲಾದವರು ಉಪಸ್ಥಿತರಿದ್ದರು.ತಮಿಳು ಬಂಧುಗಳೇ ಹೆಚ್ಚಾಗಿರುವ ಬಡಾವಣೆಯಾಗಿರುವುದರಿಂದ ಪೇಜಾವರ ಶ್ರೀಗಳು ತಮಿಳು ಭಾಷೆಯಲ್ಲೂ ಆಶೀರ್ವಚನ ನೀಡಿ ನಿವಾಸಿಗಳ ಮೆಚ್ಚುಗೆ ಪಡೆದರು.

ಪೇಜಾವರ ಮಠದ ವತಿಯಿಂದ ಬಡಾವಣೆಯ ದಲಿತ ಬಂಧುಗಳಿಗೆ ಕೃಷ್ಣಾಷ್ಟಮೀ ಪ್ರಸಾದ ವಿತರಿಸಲಾಯಿತು .

Edited By : Shivu K
Kshetra Samachara

Kshetra Samachara

04/09/2021 11:32 am

Cinque Terre

12.57 K

Cinque Terre

0