ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಬ್ರಹ್ಮಾವರ ಸುತ್ತಮುತ್ತ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ

ಕೋಟ: ಪರಶುರಾಮ ಸೃಷ್ಟಿಯ ಕರಾವಳಿಯ ಮಣ್ಣಿನಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದ್ದು, ಊರೂರಿನಲ್ಲಿರುವ ಪ್ರತಿ ನಾಗನ ಕಲ್ಲಿಗೂ ಈ ದಿನ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅದೇ ರೀತಿ ಇಂದು ನಾಗರಪಂಚಮಿ ಪ್ರಯುಕ್ತ ಬ್ರಹ್ಮಾವರ ತಾಲೂಕಿನ ವಿವಿಧ ನಾಗಾರಾಧನೆಯ ಧಾರ್ಮಿಕ ಕ್ಷೇತ್ರ ಹಾಗೂ ನಾಗಬನಗಳಲ್ಲಿ ವಿಶೇಷ ಪೂಜೆ, ಸೇವೆ ನಡೆಯಿತು.

ಇಲ್ಲಿನ ನೀಲಾವರ ಪಂಚಮಿಕಾನನ, ಮಂದಾರ್ತಿ ದುರ್ಗಾಪರಮೇಶ್ವರಿ ಸನ್ನಿಧಿಯ ನಾಗಸ್ಥಾನ, ಚೋರಾಡಿ, ತೆಕ್ಕಟ್ಟೆ, ಸೇರಿದಂತೆ ವಿವಿಧ ಕಡೆಗಳಲ್ಲಿ ವಿಶೇಷ ಪೂಜೆ,‌ ತನು ಸೇವೆ ನೆರವೇರಿದ್ದು ಭಕ್ತಾಧಿಗಳು ಮೂಲ‌ ನಾಗಸ್ಥಾನಗಳಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಕೋವಿಡ್ ಕಾರಣದಿಂದಾಗಿ ಬಹುತೇಕ ಕಡೆಗಳಲ್ಲಿ ಸರಳ ಆಚರಣೆ ನೆರವೇರಿತು ಹಾಗೂ ಹಬ್ಬದ ವಾತಾವರಣ ಸ್ವಲ್ಪ ಮಟ್ಟಿಗೆ ಕುಂದುಂಟಾಯಿತು. ರಾತ್ರಿಯಿಂದ ಜೋರಾಗಿ ಸುರಿಯುತ್ತಿರುವ ಮಳೆ ಕೂಡ ಪೂಜೆಗೆ ಸ್ವಲ್ಪ ಹಿನ್ನಡೆ ಉಂಟು ಮಾಡಿತು. ಆದರೆ ಇವೆಲ್ಲದರ ನಡುವೆ ನಾಗರಪಂಚಮಿ ಸಂಭ್ರಮದಿಂದ ನೆರವೇರಿತು. ಮಾರುಕಟ್ಟೆಯಲ್ಲಿ ಎಳನೀರು, ಹೂವು, ಬಾಳೆಹಣ್ಣು, ಕೇದಿಗೆ ಹೂವಿಗೆ ವಿಶೇಷ ಬೇಡಿಕೆ ಕಂಡುಬಂತು.

Edited By : Manjunath H D
Kshetra Samachara

Kshetra Samachara

13/08/2021 08:23 pm

Cinque Terre

9.86 K

Cinque Terre

0

ಸಂಬಂಧಿತ ಸುದ್ದಿ