ಕಾಪು : ವರ್ಷದ ಮೊದಲ ಹಬ್ಬ ನಾಗರ ಪಂಚಮಿಯನ್ನು ಜಲಂಚಾರು ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ, ಮಜೂರು ನಾಗಬ್ರಹ್ಮ ರಕ್ತೇಶ್ವರಿ ನಾಗಬನ, ಎರ್ಮಾಳು ಜನಾರ್ಧನ ದೇವಸ್ಥಾನ ಸೇರಿದಂತೆ ಕಾಪು ತಾಲೂಕಿನ ವಿವಿಡೆದೆ ಶೃದ್ದ ಭಕ್ತಿಯಿಂದ ಆಚರಿಸಲಾಯಿತು.
ನಾಗದೇವರಿಗೆ ಹಾಲು, ಸಿಹಿಯಾಳ, ಪಂಚಾಮೃತ ಅಭಿಷೇಕ ಸೇರಿದಂತೆ ವಿಶೇಷ ಪೂಜಾದಿಗಳು ಕಾರ್ಯಗಳು ನೆರವೇರಿದವು.
ಜಲಂಚಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಂದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಯಿತು.ಸರಕಾರದ ಕರೋನ ನಿಯಾಮವಳಿಗಳನ್ನು ಪಾಲಿಸಿಕೊಂಡು ಸೀಮಿತ ಸಂಖ್ಯೆಯ ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.
Kshetra Samachara
13/08/2021 03:23 pm