ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಉರ್ವಾ ಶ್ರೀ ಮಾರಿಯಮ್ಮ ಜಾತ್ರೋತ್ಸವಕ್ಕೆ ಚಾಲನೆ; 'ಪ್ರಸಾದ ಹಾರಿಸುವ' ಸಂಭ್ರಮಾಚರಣೆ

ಮಂಗಳೂರು: ನಗರದ ಫಲ್ಗುಣಿ ನದಿ ತಟದಲ್ಲಿರುವ ಬೋಳೂರು ಸನಿಹದ ಸುಪ್ರಸಿದ್ಧ ಕಾರಣಿಕ ಕ್ಷೇತ್ರ ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೆಳಗ್ಗೆ ಉರ್ವಾ ಮೈದಾನದಲ್ಲಿ 'ಪ್ರಸಾದ ಹಾರಿಸುವಿಕೆ' ಧಾರ್ಮಿಕ ಕಾರ್ಯಕ್ರಮ ಜರುಗಿತು.

ಸಾನಿಧ್ಯದಲ್ಲಿ ಫೆ. 26ರಂದು ಶುಕ್ರವಾರ ಬೆಳಗ್ಗೆ ಶ್ರೀ ಚಂಡಿಕಾ ಯಾಗ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಮಾರ್ಚ್ 1ರಂದು ಸೋಮವಾರ ಶ್ರೀ ಮಾರಿಯಮ್ಮ ದೇವರ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮತ್ತು ಹಾಲು ಉಕ್ಕಿಸುವ ಪೂಜೆ, ಮಾರ್ಚ್ 2ರಂದು ಮಂಗಳವಾರ ವರ್ಷಾವಧಿ ಮಹಾಪೂಜೆ, ರಾಶಿ ಪೂಜೆ ಜರುಗಲಿದೆ ಹಾಗೂ ಮಾರ್ಚ್ 6ರಂದು ಶನಿವಾರ ರಾತ್ರಿ ಶ್ರೀ ಮಲರಾಯ- ಧೂಮಾವತಿ ದೈವಗಳ ನೇಮೋತ್ಸವ ನಡೆಯಲಿದೆ.

Edited By : Manjunath H D
Kshetra Samachara

Kshetra Samachara

19/02/2021 03:22 pm

Cinque Terre

8.65 K

Cinque Terre

0