ಮುಲ್ಕಿ: ಇಲ್ಲಿಗೆ ಸಮೀಪದ ಪುನರೂರು ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ನಡೆಯಿತು. ದೈವಸ್ಥಾನದಲ್ಲಿ ಶುದ್ಧೀಕರಣ ನಡೆದು ಗಣಹೋಮ, ನವಕ ಬಳಿಕ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಭಂಡಾರ ಇಳಿದು ಶ್ರೀ ಮೈಸಂದಾಯ ನೇಮೋತ್ಸವ ಬಳಿಕ ಶ್ರೀ ರಕ್ತೇಶ್ವರಿ ನೇಮೋತ್ಸವ ನಡೆಯಿತು.
ಈ ಸಂದರ್ಭ ದೈವಸ್ಥಾನ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ದೇವಪ್ರಸಾದ ಪುನರೂರು, ಯಜಮಾನ ಗಂಗಾಧರ್ ಶೆಟ್ಟಿ ದೇಂದೊಟ್ಟು, ರವಿ ಶೆಟ್ಟಿ ಪುನರೂರು ಉಪಸ್ಥಿತರಿದ್ದರು.
Kshetra Samachara
16/02/2021 01:04 pm