ಬೆಳ್ತಂಗಡಿ: ತಾಲೂಕಿನ ನಿಟ್ಟೆಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ, ನವಗುಳಿಗ ಕ್ಷೇತ್ರದ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾದ ಕೆ. ಲಕ್ಷ್ಮಿ ನಾರಾಯಣ ಆಸ್ರಣ್ಣರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಯಾಗ ನಡೆಯಿತು.
ಶ್ರೀ ದುರ್ಗಾಪರಮೇಶ್ವರಿ ಅಮ್ಮನಿಗೆ ಪಂಚಾಮೃತ ಅಭಿಷೇಕ, ಪಂಚವಿಂಶತಿ ಕಲಶ, ಪಲ್ಲಪೂಜೆ, ಅದಿವಾಸ ಹೋಮ ಸೇರಿದಂತೆ ವಿಶೇಷ ರಂಗಪೂಜೆಯೊಂದಿಗೆ ಮಹಾ ಪೂಜೆ ನಡೆಯಿತು.
ಕ್ಷೇತ್ರದ ಪರಿವಾರ ದೈವಗಳಿಗೆ ಗಗ್ಗರ ಸೇವೆ ಜರುಗಿತು. ಸಾವಿರಾರು ಭಕ್ತಾದಿಗಳು ಈ ಪುಣ್ಯ ಉತ್ಸವದಲ್ಲಿ ಭಾಗಿಯಾದರು.
Kshetra Samachara
07/02/2021 03:17 pm