ಮುಲ್ಕಿ: ಇತಿಹಾಸ ಪ್ರಸಿದ್ಧ ಕಾರ್ನಾಡು ಶ್ರೀ ಹರಿಹರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ಈ ಸಂದರ್ಭ ಅರ್ಚಕ ಹಯಗ್ರೀವ ಪಡ್ಡಿಲ್ಲಾಯ ಮಾತನಾಡಿ, ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಪುರಾತನ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಹರಿಹರ ಕ್ಷೇತ್ರ ಜಾತ್ರಾ ಮಹೋತ್ಸವದ ಸಂಭ್ರಮದಲ್ಲಿದ್ದು, ಗುರುವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದಿದೆ. ಈ ಬಾರಿ ಕೊರೊನಾ ದಿಂದಾಗಿ ಸರಳ ರೀತಿಯಲ್ಲಿ ಜಾತ್ರಾ ಮಹೋತ್ಸವ ನಡೆದಿದ್ದು, ಮುಂದಿನ ವರ್ಷದಲ್ಲಿ ದೇವಳದ ಬ್ರಹ್ಮ ಕಲಶೋತ್ಸವ ಆಡಳಿತ ಮೊಕ್ತೇಸರ ಅರವಿಂದ ಪೂಂಜ ನೇತೃತ್ವದಲ್ಲಿ ನಡೆಯಲಿದ್ದು, ಎಲ್ಲ ಭಕ್ತರ ಸಹಕಾರ ಅಗತ್ಯ ಎಂದರು.
ಈ ಸಂದರ್ಭ ದೇವಳದ ಆಡಳಿತ ಮಂಡಳಿಯ ರವಿಕುಮಾರ್ ಭಟ್, ಕೃಷ್ಣಶೆಟ್ಟಿ, ಡಾ. ಹರಿಶ್ಚಂದ್ರ ಸಾಲಿಯಾನ್, ವೈ ಎನ್ ಸಾಲ್ಯಾನ್, ಶಶೀಂದ್ರ ಸಾಲಿಯಾನ್, ಸುಂದರ ಶೆಟ್ಟಿ ಕುಬೆವೂರು, ಕೃಷ್ಣಶೆಟ್ಟಿ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/01/2021 04:06 pm