ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದೊಡ್ಡಣಗುಡ್ಡೆ ರಹ್ಮಾನಿಯಾ ಮಸೀದಿಯಲ್ಲಿ ಉರೂಸ್ ಸಡಗರ

ಉಡುಪಿ: ಉಡುಪಿಯ ಪ್ರಸಿದ್ಧ ದೊಡ್ಡಣಗುಡ್ಡೆ ರಹ್ಮಾನಿಯಾ ಜುಮಾ ಮಸೀದಿ ಮತ್ತು ದರ್ಗಾದಲ್ಲಿ ವಾರ್ಷಿಕ ಉರೂಸ್ ನಡೆಯುತ್ತಿದೆ.

ಹಝ್ರತ್ ಅಶೈಖ್ ಅಹ್ಮದ್ ಹಾಜಿ ಖಾದಿರಿಯ್ಯ ರಿಫಾಯಿ ಚಿಸ್ತಿಯ್ಯ ಅವರ ಎಪ್ಪತ್ತ ಮೂರನೇ ಉರೂಸ್ ಗೆ ಶ್ರದ್ಧಾಳುಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಉರೂಸ್ ಪ್ರಯುಕ್ತ ಬೆಳಿಗ್ಗೆ ಮಸೀದಿಯಲ್ಲಿ ಮೌಲಿದ್ ಪಾರಾಯಣ ಹಮ್ಮಿಕೊಳ್ಳಲಾಗಿತ್ತು.

ನಂತರ ಉಸ್ತಾದರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಂಪನ್ನಗೊಂಡಿತು. ವರ್ಷಂಪ್ರತಿಯಂತೆ ಈ ವರ್ಷವೂ ಸಂದಲ್ ಮೆರವಣಿಗೆ ಆಯೋಜಿಸಲಾಗಿತ್ತು. ಮುಸಲ್ಮಾನ ಬಾಂಧವರ ದಫ್ ಸಂದಲ್ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು.

ಉರೂಸ್ ಹಿನ್ನೆಲೆಯಲ್ಲಿ ರಹ್ಮಾನಿಯಾ ಮಸೀದಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. ಕೇವಲ ಮುಸಲ್ಮಾನರಷ್ಟೇ ಅಲ್ಲದೆ, ಹಿಂದೂ- ಮುಸ್ಲಿಂ ಸೌಹಾರ್ದತೆಯ ಪ್ರತೀಕವಾಗಿರುವ ದೊಡ್ಡಣಗುಡ್ಡೆ ಉರೂಸ್ ಗೆ ಸಾಕಷ್ಟು ಹಿಂದೂ ಸಹೋದರರು ಆಗಮಿಸುತ್ತಾರೆ. ಉರೂಸ್ ಪ್ರಯುಕ್ತ ನಡೆದ ಸಾಮೂಹಿಕ ಅನ್ನದಾನದಲ್ಲಿ ಸಾವಿರಾರು ಜನ ಪಾಲ್ಗೊಂಡರು.

Edited By : Manjunath H D
Kshetra Samachara

Kshetra Samachara

24/01/2021 03:55 pm

Cinque Terre

16.03 K

Cinque Terre

0

ಸಂಬಂಧಿತ ಸುದ್ದಿ