ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವ ಇಂದು
ಶಿಬರೂರು ವೇದಮೂರ್ತಿ ಶ್ರೀ ಗೋಪಾಲಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಸೋಮವಾರ ಬೆಳಗ್ಗೆ ತುಲಾಭಾರ ಸೇವೆ, ಮಹಾಪೂಜೆ, ರಾತ್ರಿ ಪಂಚಮಿ ಬಲಿ ಉತ್ಸವ ನಡೆಯಿತು. ಬೆಳಿಗ್ಗೆ ಕಿರುಷಷ್ಠಿ ಉತ್ಸವ , ಚಂಡಿಕಾ ಯಾಗ , ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ದೇವಳದ ತಂತ್ರಿಗಳಾದ ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳು ಮಾತನಾಡಿ, ಕಿರುಷಷ್ಠಿ ಪರ್ವಕಾಲದಲ್ಲಿ ಲೋಕಕಲ್ಯಾಣಾರ್ಥವಾಗಿ ದೇವಳದಲ್ಲಿ ಅನಾದಿಕಾಲದಿಂದಲೂ ಚಂಡಿಕಾ ಯಾಗ ನಡೆಯುತ್ತಿದ್ದು, ವಿಶ್ವಕ್ಕೆ ಹಬ್ಬಿರುವ ಕೊರೊನಾ ಮಹಾಮಾರಿ ದೂರವಾಗಿ ಶಾಂತಿ, ಆರೋಗ್ಯ ನೆಲೆಸಲಿ ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ದೇವಳದ ಜೀರ್ಣೋದ್ಧಾರದಲ್ಲಿ ಎಲ್ಲರೂ ಕೈ ಜೋಡಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಲು ಮನವಿ ಮಾಡಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿದಾಸ್ ಭಟ್ ತೋಕೂರು ಮಾತನಾಡಿ, ದೇವಳದಲ್ಲಿ ಷಷ್ಠಿ ಪ್ರಯುಕ್ತ ರಾತ್ರಿ ಬಲಿ ಉತ್ಸವ ನಡೆಯಲಿದ್ದು, ಬಳಿಕ ಹತ್ತು ಸಮಸ್ತರ ನೆರವಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ 'ಶ್ರೀ ದೇವಿ ಮಹಾತ್ಮೆ' ಯಕ್ಷಗಾನ ಬಯಲಾಟ ಜರುಗಲಿದೆ. ಭಕ್ತಾದಿಗಳು ಸಾಮಾಜಿಕ ಅಂತರ, ಮಾಸ್ಕ್ , ಸ್ವಚ್ಛತೆಯೊಂದಿಗೆ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಜೀರ್ಣೋದ್ದಾರ ಸಮಿತಿಯ ಧರ್ಮದರ್ಶಿ ಹರಿಕೃಷ್ಣ ಪುನರೂರು, ಅರ್ಚಕ ಮಧುಸುದನ್ ಆಚಾರ್ಯ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ವೆಂಕಟೇಶ ಭಟ್ ಪಾವಂಜೆ, ವ್ಯವಸ್ಥಾಪನಾ ಸಮಿತಿಯ ಪುರುಷೋತ್ತಮ ರಾವ್, ವಿಜಯ ಕುಮಾರ್ ರೈ, ಲೋಕಯ್ಯ ಕೆ.ಸಾಲ್ಯಾನ್, ಯೋಗೀಶ್ ಕೋಟ್ಯಾನ್, ವಿಪುಲ ಡಿ.ಶೆಟ್ಟಿಗಾರ್, ಶಾರದಾ ಜಿ.ಬಂಗೇರ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/01/2021 07:09 pm