ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮುಕ್ಕೋಟಿ ದ್ವಾದಶಿ; ಶಾಂಭವಿ ನದಿಯಲ್ಲಿ 'ಬಿಂದು ಮಾಧವ' ಪುಣ್ಯ ಸ್ನಾನ

ಮುಲ್ಕಿ: ಮುಕ್ಕೋಟಿ ದ್ವಾದಶಿ ಪ್ರಯುಕ್ತ ಶಾಂಭವಿ ನದಿ ತೀರದಲ್ಲಿ ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಬಿಂದು ಮಾಧವ ದೇವರ ನದಿ ಸ್ನಾನ ನಡೆಯಿತು.

ಶುಕ್ರವಾರದ ಪ್ರಾತಃಕಾಲದಲ್ಲಿ ಬಿಂದು ಮಾಧವ ದೇವರನ್ನು ಶ್ರೀ ವೆಂಕಟರಮಣ ದೇವಸ್ಥಾನ ದಿಂದ ಪಲ್ಲಕ್ಕಿಯ ಮೂಲಕ ಪೇಟೆ ಸವಾರಿ ನಡೆದು, ಶಾಂಭವಿ ನದಿ ತೀರಕ್ಕೆ ಬಂದು ಸ್ನಾನ ನಡೆಯಿತು.

ಬಳಿಕ ವಿಶೇಷ ಪೂಜೆ ಜರುಗಿ, ಪ್ರಾರ್ಥಿಸಲಾಯಿತು. ಅರ್ಚಕ ಪದ್ಮನಾಭ ಭಟ್ ವಿಶೇಷ ಪ್ರಾರ್ಥನೆ ನಡೆಸಿ 'ವಿಶ್ವಕ್ಕೆ ಹಬ್ಬಿರುವ ಕೊರೊನಾ ಮಹಾಮಾರಿ ದೂರವಾಗಿ ಆರೋಗ್ಯ,

ಶಾಂತಿ ನೆಲೆಸಲಿ ಹಾಗೂ ದೇವಳದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಪ್ರತಿಷ್ಠಾ ಹುಣ್ಣಿಮೆ ಮಹೋತ್ಸವ ನಿರ್ವಿಘ್ನವಾಗಿ ನಡೆಯಲಿ ಎಂದರು. ಅರ್ಚಕರು, ಸಿಬ್ಬಂದಿ, ಭಜಕ ವೃಂದ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

26/12/2020 11:22 am

Cinque Terre

12.15 K

Cinque Terre

0

ಸಂಬಂಧಿತ ಸುದ್ದಿ