ಉಡುಪಿ: ಉಡುಪಿ ಜಿಲ್ಲೆಯಿಂದ ಪ್ರತಿವರ್ಷ 70 ಸಾವಿರಕ್ಕಿಂತಲೂ ಹೆಚ್ಚು ಮಂದಿ ಕೇರಳದ ಶಬರಿಮಲೆ ಯಾತ್ರೆ ಮಾಡುತ್ತಾರೆ.
ಜನವರಿಯಲ್ಲಿ ಮಕರ ಸಂಕ್ರಾಂತಿಯ ಜ್ಯೋತಿ ದರ್ಶನಕ್ಕೆ 40 ಸಾವಿರಕ್ಕಿಂತಲೂ ಹೆಚ್ಚು ಭಕ್ತರು ತೆರಳುತ್ತಾರೆ. ವಿಶ್ವಾದ್ಯಂತ ವ್ಯಾಪಿಸಿರುವ ಕೊರೊನಾ ಮಹಾಮಾರಿಯಿಂದಾಗಿ ಈ ಬಾರಿ ಶಬರಿಮಲೆ ಪ್ರವೇಶ ಕಷ್ಟಕರವಾಗಿದೆ.
ಕೇರಳ ಸರ್ಕಾರ ಲೆಕ್ಕಕ್ಕಿಂತ ಹೆಚ್ಚು ನಿಯಮಾವಳಿ ವಿಧಿಸಿದೆ. ಕರ್ನಾಟಕದಿಂದ ತೆರಳುವ ಭಕ್ತರು ಕೋವಿಡ್ ಟೆಸ್ಟ್ ಮಾಡಿರಬೇಕು. ನೀಲಕಲ್ ಎಂಬಲ್ಲಿ ಇನ್ನೊಂದು ಕೋವಿಡ್ ಟೆಸ್ಟ್ ಮಾಡಿಸಬೇಕು. ಪಂಪಾ ನದಿ ತೀರದಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಬೇಕು ಎಂದಿದೆ. ಈ ದುಬಾರಿ ನಿಯಮ ಉಡುಪಿಯ ಅಯ್ಯಪ್ಪ ಭಕ್ತರನ್ನು ಕೆರಳಿಸಿದೆ. ಇಷ್ಟೆಲ್ಲ ನಿಯಮಾವಳಿಯ ಸಹವಾಸವೇ ಬೇಡ ಅಂತ ಪಂದಳಕಂದನ ಸನ್ನಿಧಾನಕ್ಕೆ ತೆರಳದೆ 'ಭವನಂ ಸನ್ನಿಧಾನಂ' ಅಭಿಯಾನ ಉಡುಪಿಯಲ್ಲಿಯೇ ಶುರು ಮಾಡಿದ್ದಾರೆ.
ಈ ಅಭಿಯಾನದ ಪ್ರಕಾರ ಮನೆಯಲ್ಲೇ ಇದ್ದು ಕುಟುಂಬ ಸಮೇತ ಅಯ್ಯಪ್ಪಾರಾಧನೆ ಮಾಡಲು ನಿರ್ಧರಿಸಿದ್ದಾರೆ.
ಉಡುಪಿ ಜಿಲ್ಲೆಯ ಅಯ್ಯಪ್ಪ ಮಾಲಾಧಾರಿಗಳು ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಅಯ್ಯಪ್ಪ ಭಕ್ತರು ನಮ್ಮ ಅಭಿಯಾನದ ಜೊತೆ ಕೈಜೋಡಿಸಿದ್ದಾರೆ.
ಅಯ್ಯಪ್ಪ ಮಂದಿರಗಳಲ್ಲಿ ವಿಶೇಷ ಪೂಜೆ ಆಯೋಜಿಸುವುದು, ಅನ್ನಸಂತರ್ಪಣೆ ನಡೆಸುತ್ತೇವೆ. ಯಾವುದೇ ಶಿಬಿರ ಮಾಡದೆ ಮನೆಗಳಲ್ಲೇ ಅಯ್ಯಪ್ಪ ದೇವರನ್ನು ಕುಟುಂಬ ಸಮೇತವಾಗಿ ನಿಯಮ ನಿಷ್ಠೆಯಿಂದ ಆರಾಧಿಸಲು ತೀರ್ಮಾನಿಸಿರುವುದಾಗಿ ಅಯ್ಯಪ್ಪ ಭಕ್ತರು ಹೇಳಿದ್ದಾರೆ.
Kshetra Samachara
05/12/2020 03:31 pm