ಉಡುಪಿ: ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಹಳೆಯ ಪ್ಲಾಸ್ಟಿಕ್ ಫ್ಲೆಕ್ಸ್ ತೆಗೆಯಲಾಗಿದೆ. ಕನ್ನಡದಲ್ಲಿ ಕೃಷ್ಣ ಮಠ ಹೆಸರಿನ ನಾಮಫಲಕ ಪ್ಲಾಸ್ಟಿಕ್ ಆಗಿತ್ತು. ಈಗಾಗಲೇ ಅದನ್ನು ತೆಗೆದು ಮೂಲ ತುಳು ಮತ್ತು ಸಂಸ್ಕೃತದಲ್ಲಿ ಮರದ ನಾಮಫಲಕ ಅಳವಡಿಸಲಾಗಿದೆ. ಒಂದೇ ಫಲಕದಲ್ಲಿ ಕನ್ನಡ, ತುಳು ಮತ್ತು ಸಂಸ್ಕೃತದ ಫಲಕ ಅಂದ ಹಾಳು ಮಾಡುತ್ತದೆ ಎಂಬ ಕಾರಣಕ್ಕೆ ತುಳು ಮತ್ತು ಸಂಸ್ಕೃತ ಫಲಕ ಮೊದಲು ಅಳವಡಿಸಿದೆವು.
ಲಕ್ಷ ದೀಪೋತ್ಸವ ಹಿನ್ನೆಲೆಯಲ್ಲಿ ಕನ್ನಡ ಫಲಕ ಅಳವಡಿಕೆ ವಿಳಂಬವಾಗಿದೆ. ಈಗಾಗಲೇ ಕನ್ನಡ ಭಾಷೆಯ ಮರದ ನಾಮಫಲಕ ಕೆತ್ತನೆ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಕೆಲವೇ ದಿನದಲ್ಲೇ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಸಲಾಗುವುದು
ಎಂದು ಕೃಷ್ಣಮಠದ ಕಲೆ- ಸಂಸ್ಕೃತಿ ಸಲಹೆಗಾರ ಪುರುಷೋತ್ತಮ ಅಡ್ವೆ ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
01/12/2020 04:52 pm