ಮುಲ್ಕಿ: ಮುಲ್ಕಿ ಸಮೀಪದ ಇತಿಹಾಸ ಪ್ರಸಿದ್ಧ ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಸಂಭ್ರಮದ ದೀಪಾವಳಿ ಆಚರಣೆ, ಬಲೀಂದ್ರ ಪೂಜೆ, ರಂಗಪೂಜೆ ಹಾಗೂ ಶ್ರೀ ದೇವರ ಉತ್ಸವ ಬಲಿ ನಡೆಯಿತು.
ಈ ಸಂದರ್ಭ ದೇವಳದ ಆಡಳಿತಾಧಿಕಾರಿ ಚಂದ್ರ ಪೂಜಾರಿ ಮಾತನಾಡಿ, ಕೊರೊನಾ ದಿನಗಳಲ್ಲಿ ದೀಪಾವಳಿಯ ಹಬ್ಬವನ್ನು ಸರಳವಾಗಿ ಆಚರಣೆ ಮಾಡುವುದರ ಜೊತೆಗೆ ಸರಕಾರದ ನೀತಿ ನಿಯಮ ಪಾಲಿಸಿಕೊಂಡು ಸುರಕ್ಷತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಮನವಿ ಮಾಡಿದರು.
ಶಿಮಂತೂರು ದೇವಳದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವ ಸ್ಥಳೀಯ ಯುವಕ ಹಾಗೂ ಯುವತಿ ಮಂಡಲದ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ದೇವಳದ ಅಭಿವೃದ್ಧಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗುವುದು ಎಂದರು. ದೇವಳ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅಚ್ಚುತ ಭಟ್ ಪಾವಂಜೆ, ಮುಲ್ಕಿ ಠಾಣಾ ಎಎಸ್ಸೈ ಚಂದ್ರಶೇಖರ್, ಉದ್ಯಮಿ ರಘು ಸಾಸ್ತಾನ, ಉದಯಕುಮಾರ್ ಶೆಟ್ಟಿ ಶಿಮಂತೂರು, ಮಾಜಿ ಪಂ. ಸದಸ್ಯ ಹರೀಶ್ ಶೆಟ್ಟಿ ಶಿಮಂತೂರು, ಮುಲ್ಕಿ ನ.ಪಂ. ಸಿಬ್ಬಂದಿ ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/11/2020 12:16 pm