ಉಡುಪಿ: ಶ್ರೀಕೃಷ್ಣಮಠದಲ್ಲಿ ಆಶ್ವಯುಜ ಶುಕ್ಲ ತ್ರಯೋದಶಿಯಿಂದ ಕೃಷ್ಣ ಪಂಚಮಿಯವರೆಗೆ ಬಡಗು ಮಾಳಿಗೆಯಲ್ಲಿ ನಿರ್ಮಿಸಿದ ಮಂಟಪದಲ್ಲಿ ಋಕ್ಸಂಹಿತಾ ಯಾಗ ನಡೆಯುತ್ತಿದ್ದು, ಕೊನೆಯ ದಿನವಾದ ಇಂದು ಮಹಾಮಂಗಳಾರತಿ ಹಾಗೂ ಪೂರ್ಣಾಹುತಿಯು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.
ಅವಧಾನಿ ವಿದ್ವಾನ್ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಯಾಗ ನಡೆಯಿತು. ನಂತರ ಮಧ್ವಸರೋವರದಲ್ಲಿ ಮಠಾಧೀಶರು ಅವಭೃತ ಸ್ನಾನದಲ್ಲಿ ಪಾಲ್ಗೊಂಡರು.
Kshetra Samachara
05/11/2020 03:41 pm