ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬದಲಾದ ಸಮಯ; 7 ತಿಂಗಳ ಬಳಿಕ ಭಕ್ತರಿಂದ ತುಂಬಿದೆ ಶ್ರೀ ಕೃಷ್ಣಮಠ, ರಥಬೀದಿ

ಉಡುಪಿ: ಉಡುಪಿಯ ಶ್ರೀ ಕೃಷ್ಣಮಠ ಇರುವ ರಥಬೀದಿ ಏಳು ತಿಂಗಳ ಬಳಿಕ ಚಟುವಟಿಕೆಯಿಂದ ಕೂಡಿದೆ. ಶ್ರೀಕೃಷ್ಣಮಠದಲ್ಲಿ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ದರ್ಶನ ಆರಂಭವಾಗಿದ್ದು, ಭಕ್ತಾದಿಗಳು ದೇವರನ್ನು ಕಣ್ತುಂಬಿಕೊಳ್ಳಲು ಮಠದತ್ತ ಧಾವಿಸಿ ಬರುತ್ತಿದ್ದಾರೆ.

ಶ್ರೀ ಕೃಷ್ಣನ ದರ್ಶನ ಬೆಳಗ್ಗೆ 8.30 ಕ್ಕೆ ಆರಂಭ ಆಗುತ್ತದೆ. 10 ರ ವರೆಗೆ ಭಕ್ತರು ದೇವರ ದರ್ಶನ ಮಾಡಬಹುದು. ಮಹಾಪೂಜೆ ಸಂದರ್ಭ ಅವಕಾಶ ಇಲ್ಲ. ಮಧ್ಯಾಹ್ನ ಮತ್ತೆ ಮಠ ತೆರೆದುಕೊಳ್ಳುತ್ತದೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಉಡುಪಿ ಶ್ರೀ ಕೃಷ್ಣಮಠ ಎರಡು ಹೊತ್ತಿನಲ್ಲಿ ತೆರೆದುಕೊಳ್ಳುವುದು ಬಹಳ ಉಪಯೋಗವಾಗಲಿದೆ. ಹೊರ ಜಿಲ್ಲೆ, ಹೊರ ರಾಜ್ಯದ ಭಕ್ತರಿಗೆ ಮುಂಜಾನೆ, ಮಧ್ಯಾಹ್ನ, ಸಂಜೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

Edited By : Manjunath H D
Kshetra Samachara

Kshetra Samachara

05/11/2020 01:23 pm

Cinque Terre

20.64 K

Cinque Terre

3

ಸಂಬಂಧಿತ ಸುದ್ದಿ