ಉಡುಪಿ: ಕರಾವಳಿ ಭಾಗ ಪುಣ್ಯಕ್ಷೇತ್ರಗಳ ನೆಲೆಬೀಡು ಇಲ್ಲಿಯ ಕೆಲವೊಂದು ದೇವಾಲಯಗಳಿಗೆ ಪುರಾಣಗಳ ಕಥೆಯ ಉಲ್ಲೇಖವಿದೆ. ಅದೇ ರೀತಿಯಾಗಿ ಉಡುಪಿ ಜಿಲ್ಲೆಯ ಜಪ್ತಿ ಗ್ರಾಮದ ಬಲಮುರಿ ಗಾಲವೇಶ್ವರ ದೇವಸ್ಥಾನದ ಇತಿಹಾಸ ರೋಚಕವಾಗಿದೆ.
ಅನಾದಿಯಲ್ಲಿ ಗಾಲವ ಎನ್ನುವ ಋಷಿಮುನಿಯು ಬಲಮುರಿ ನದಿಯ ದಡದಲ್ಲಿ ಆಶ್ರಮವೊಂದನ್ನು ಮಾಡಿಕೊಂಡು ತಪಸ್ಸು ಮಾಡುತ್ತಿದ್ದರಂತೆ, ಗಾಲವ ಮಹಾಮುನಿಯು ಮಹಾನ್ ಶಿವಭಕ್ತ ಆಗಿದ್ದ, ಈ ಹಿನ್ನೆಲೆಯಲ್ಲಿ ಉತ್ತರಕ್ಷೇತ್ರದಲ್ಲಿ ಶತಸಹಸ್ರವರ್ಷ ತಪಸ್ಸುಮಾಡಿ ಬ್ರಹ್ಮದೇವನ ಕೈಯಲ್ಲಿರುವ ಬಲಮುರಿ ಶಂಖವನ್ನು ವರವಾಗಿ ಪಡೆದುಕೊಳ್ಳುತ್ತಾರೆ. ಬಲಮುರಿ ಶಂಖವನ್ನ ಪಡೆದ ಋಷಿಮುನಿ ತಮ್ಮ ಆಶ್ರಮಕ್ಕೆ ಹಿಂದಿರುಗುತ್ತಾರೆ, ವಾರಾಹಿ ನದಿಯ ದಂಡೆಯಲ್ಲಿ ಶಂಖ ಮತ್ತು ಕಮಂಡಲವನ್ನು ಇಟ್ಟು ನಿತ್ಯ ಕರ್ಮದಲ್ಲಿ ತೊಡಗಿಕೊಳ್ಳುತ್ತಾರೆ, ಅದೇ ಸಮಯದಲ್ಲಿ ನಂದಿಯನ್ನೇರಿ ಶಿವ-ಪಾರ್ವತಿಯರು ಆಕಾಶ ಮುಖೇನ ಸಂಚರಿಸುವಾಗ ಗಾಲವಮುನಿ ಆಶ್ರಮವನ್ನು ಗಮನಿಸಿ ಮತ್ತು ಬ್ರಹ್ಮನಿಂದ ಪಡೆದ ಬಲಮುರಿ ಶಂಖ ಈ ಮುನಿಯ ಕೈಯಲ್ಲಿ ಇರುವುದನ್ನು ಶಿವಪಾರ್ವತಿಯರು ಗಮನಿಸಿ ಅದು ಬ್ರಹ್ಮನ ಕೈಯಲ್ಲಿ ಇರಬೇಕು ಎನ್ನುವ ನಿರ್ಧಾರಕ್ಕೆ ಬಂದು, ಬಲಮುರಿ ಶಂಕವನ ತಮ್ಮ ವಶಕ್ಕೆ ಪಡೆದುಕೊಂಡು ಅದೃಷ್ಟ ರೂಪದಲ್ಲಿ ಅಲ್ಲೇ ನಿಂತುಕೊಳ್ಳುತ್ತಾರೆ. ನಿತ್ಯಕರ್ಮಗಳನ್ನು ಮುಗಿಸಿ ಬಂದ ಮುನಿಗೆ ಬಲಮುರಿ ಶಂಖ ಕಾಣದಿರುವುದು ಆಘಾತವಾಗುತ್ತದೆ, ನಂತರ ಕುಪಿತಗೊಂಡು ನದಿಯನ್ನು ಸೀಳಿ ಅಗ್ನಿಕುಂಡವನ್ನು ಸೃಷ್ಟಿಸಿ ಆತ್ಮಹತ್ಯೆಗೆ ಯತ್ನಿಸುತ್ತಾನೆ ,ನಂತರ ಶಿವ-ಪಾರ್ವತಿ ಪ್ರತ್ಯಕ್ಷರಾಗಿ ಬಲಮುರಿ ಋಷಿಯ ಭಕ್ತಿಗೆ ಮೆಚ್ಚಿ ಇದೇ ಸ್ಥಳದಲ್ಲಿ ಐಕ್ಯವಾಗಿ ಭಕ್ತರನ್ನ ಕಾಪಾಡುವಂತೆ ವರ ನೀಡುತ್ತಾರೆ ಅಂದಿನಿಂದ ಇಂದಿನ ತನಕ ಈ ಸ್ಥಳದಲ್ಲಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಲ್ಲಿ ಬಲಮುರಿ ಗಾಲವೇಶ್ವರ ದೇವಸ್ಥಾನ ಪ್ರಸಿದ್ಧಿ ಪಡೆದಿದೆ, ದೇವಸ್ಥಾನ ಇನ್ನು ಹಳೆಯ ಕಟ್ಟಡದಲ್ಲಿಯೇ ಇದ್ದು ಇದರ ಜೀರ್ಣೋದ್ಧಾರವಾರೆ ಇತಿಹಾಸದ ಕಥೆಗಳನ್ನು ಹೇಳುವ ಇಂಥ ಪುರಾತನ ದೇವಸ್ಥಾನಗಳ ಉಳಿವಿಗೆ ಸಹಕರಿಸಿದಂತಾಗುತ್ತದೆ.
ಸಂದೇಶ್ ಶೆಟ್ಟಿ ಆಜ್ರಿ : ಪಬ್ಲಿಕ್ ನೆಕ್ಸ್ಟ್ ಉಡುಪಿ.
Kshetra Samachara
02/11/2020 04:51 pm