ಉಡುಪಿ: ಇಂದು ಶ್ರೀ ರಾಮ ಮಂದಿರ ಟ್ರಸ್ಟಿಗಳ ಸಭೆ ನಡೆದಿದ್ದು, ಸಭೆಯಲ್ಲಿ ಉಡುಪಿಯ ಪೇಜಾವರ ಶ್ರೀಗಳೂ ಭಾಗಿಯಾಗಿದ್ದಾರೆ.ಶ್ರೀ ರಾಮ ಮಂದಿರ ನಿರ್ಮಾಣದ ರೂಪುರೇಷೆ ಕುರಿತು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು,L&t ಕಂಪೆನಿಗೆ ಮಂದಿರ ಕಾಮಗಾರಿ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ.ಟಾಟಾ ಕಂಪೆನಿಗೆ ಮಂದಿರದ ಕಾಮಗಾರಿ ಮೇಲುಸ್ತುವಾರಿ ವಹಿಸಲಾಗುವುದು.
ಎರಡೂ ಕಂಪೆನಿಗಳು ಈ ಜವಾಬ್ದಾರಿಯನ್ನು ಒಪ್ಪಿಕೊಂಡಿವೆ.L&t ಕಂಪೆನಿಯ ಕಾಮಗಾರಿಯನ್ನು ಟಾಟಾ ಸಂಸ್ಥೆ ಪರಿಶೀಲನೆ ನಡೆಸುತ್ತದೆ.
ಅಂತಿಮವಾಗಿ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಒಪ್ಪಿಗೆ ನೀಡುತ್ತಾರೆ ಎಂದು ಇಂದು ಸಭೆಯಲ್ಲಿ ನಡೆದ ತೀರ್ಮಾನದ ಕುರಿತು
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
Kshetra Samachara
01/11/2020 02:10 pm