ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ದಾರಿದೀಪದ ಅವ್ಯವಸ್ಥೆ;ಸಂಚಾರ ದುಸ್ತರ!!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ಮುಲ್ಕಿಯಲ್ಲಿ ದಾರಿದೀಪದ ಅವ್ಯವಸ್ಥೆ ಕಾಡುತ್ತಿದ್ದು ಹೆದ್ದಾರಿ ಸಂಚಾರ ದುಸ್ತರವಾಗಿದೆ.

ಮುಲ್ಕಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ಸೂಕ್ತ ಸರ್ವಿಸ್ ರಸ್ತೆ ಇಲ್ಲದೆ ಪಾದಾಚಾರಿಗಳಿಗೆ ನಡೆದಾಡಲು ತೀವ್ರ ತೊಂದರೆಯಾಗಿದೆ ಈ ನಡುವೆ ರಾತ್ರಿಯಾಗುತ್ತಲೇ ಹೆದ್ದಾರಿಯಲ್ಲಿ ದಾರಿದೀಪದ ಅವ್ಯವಸ್ಥೆಯಿಂದ ಕತ್ತಲುಮಯವಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ನಾಗರಿಕರು ಹಾಗೂ ವಾಹನ ಸವಾರರು ಹೆದ್ದಾರಿ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದೆಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಟೋಲ್ ತೆಗೆದುಕೊಳ್ಳುವ ಮೂಲಕ ವಾಹನ ಸವಾರರು ಹಾಗೂ ನಾಗರಿಕರ ಮೇಲೆ ಗಾಯದ ಮೇಲೆ ಬರೆ ಎಳೆದಿರುವ ಹೆದ್ದಾರಿ ಇಲಾಖೆ ನಾಗರಿಕರಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಲ್ಲಿ ವಿಫಲವಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

13/10/2022 06:59 pm

Cinque Terre

8.27 K

Cinque Terre

1