ಕಾರ್ಕಳ: ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಸಾಣೂರು ಗಣೇಶ್ ನಾಯಕ್ ಆಯ್ಕೆಯಾಗಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ವರದಿಗಾರ ಬಾಲಕೃಷ್ಣ ಭಿಮಗುಳಿ ಆಯ್ಕೆಯಾಗಿದ್ದಾಾರೆ. ಕೋಶಾಧಿಕಾರಿಯಾಗಿ ಕನ್ನಡಪ್ರಭ ಪತ್ರಿಕೆಯ ರಮಾನಂದ ಅಜೇಕಾರ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾಾನಕ್ಕೆ ಚುನಾವಣೆ ನಡೆದು ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಸ್ಥಾಾನಕ್ಕೆ ಅವಿರೋಧ ಆಯ್ಕೆ ನಡೆಯಿತು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ ಉಡುಪಿ ಜಿಲ್ಲಾಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳ ಪುನಾರ್ ರಚನೆ ಪ್ರಕ್ರೀಯೆ ತಾಲೂಕು ಪ್ರವಾಸಿ ಕೇಂದ್ರದಲ್ಲಿ ಶನಿವಾರ ನಡೆಯಿತು. ಕಾರ್ಯಕರ್ತರ ಪತ್ರಕರ್ತರ ಸಂಘದ ಜಿಲ್ಲಾಾಧ್ಯಕ್ಷ ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಆಯ್ಕೆ ಪ್ರಕ್ರೀಯೆ ನಡೆಸಿಕೊಟ್ಟರು. ಅಧ್ಯಕ್ಷ ಸ್ಥಾಾನಕ್ಕೆ ಹಾಲಿ ಅಧ್ಯಕ್ಷ ಮೊಹಮ್ಮದ್ ಶರೀಫ್ ಹಾಗೂ ಗಣೇಶ್ ನಾಯಕ್ ಇಬ್ಬರು ಆಕಾಂಕ್ಷಿಗಳಾಗಿದ್ದದರಿಂದ ಚುನಾವಣೆ ನಡೆದು ಗಣೇಶ್ ನಾಯಕ್ ಹೆಚ್ಚು ಮತ ಪಡೆದು ವಿಜೇತರಾದರರು.
ಬಳಿಕ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಾಲಕೃಷ್ಣ ಭೀಮಗುಳಿ ಹೆಸರು ಹಾಗೂ ಹರೀಶ್ ಆಚಾರ್ಯ ಅವರ ಹೆಸರು ಸೂಚಿಸಲ್ಪಟ್ಟಿತ್ತು. ಸಹಮತದ ಆಯ್ಕೆ ಹಿನ್ನಲೆಯಲ್ಲಿ ಹರೀಶ್ ಆಚಾರ್ಯ ಪ್ರಧಾನ ಕಾರ್ಯದರ್ಶಿ ಸ್ಪರ್ಧೆಯಿಂದ ಹಿಂದೆ ಸರಿದು ಬಾಲಕೃಷ್ಣ ಭೀಮಗುಳಿ ಅವಿರೋಧ ಆಯ್ಕೆಗೆ ಸಹಕರಿಸಿದರು. ಬಾಲಕೃಷ್ಣ ಭೀಮಗುಳಿ ಸರ್ವಾನುಮತದಿಂದ ಅವಿರೋಧ ಆಯ್ಕೆಗೊಂಡರು. ಕೋಶಾಧಿಕಾರಿ ರಾಂ ಅಜೆಕಾರ್ ಅವಿರೋಧ‘ವಾಗಿ ಆಯ್ಕೆಗೊಂಡರು. ಉಪಾಧ್ಯರಾಗಿ ಹರೀಶ್ ಸಚ್ಚರಿಪೇಟೆ, ಜತೆಕಾರ್ಯದರ್ಶಿಯಾಗಿ ಹರೀಶ್ ಆಚಾರ್ಯ , ಕ್ರೀಡಾ ಕಾರ್ಯದರ್ಶಿ ಉದಯ್ ಮುಂಡ್ಕೂರ್, ಸಾಂಸ್ಕೃತಿಕ ಕಾರ್ಯದರ್ಶಿ ಹರಿಪ್ರಸಾದ್ ನಂದಳಿಕೆ ಅವಿರೋಧವಾಗಿ ಆಯ್ಕೆಗೊಂಡರು. ಜಿಲ್ಲಾಾ ಉಪಾಧ್ಯಕ್ಷ ಆರ್. ಬಿ ಜಗದೀಶ್, ಜಿಲ್ಲಾಾ ಸಮಿತಿ ಪ್ರತಿನಿಧಿ ಉದಯ್ ಮುಂಡ್ಕೂರ್ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಶರೀಪ್ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಕೃಷ್ಣ ನಾಯ್ಕ್ ನೂತನ ಪದಾಧಿಕಾರಿಗಳಿಗೆ ದಾಖಲೆ ಹಸ್ತಾಾಂತರಿಸಿದರು. ಸದಸ್ಯರೆಲ್ಲರೂ ಉಪಸ್ಥಿತರಿದ್ದು ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿದರು.
Kshetra Samachara
24/09/2022 08:52 pm