ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ)ನ ಮಹಿಳಾ ಕಾರ್ಯಕಾರಿ ಸಮಿತಿಮತ್ತು ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಸಂಯುಕ್ತ ಆಶ್ರಯದಲ್ಲಿ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಸಹಯೋಗದೊಂದಿಗೆ ಕೈತೋಟ ಕ್ರಾಂತಿ ತರಬೇತಿ ಕಾರ್ಯಾಗಾರ ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ ನಡೆಯಿತು.
ಪರಿಸರ ಸ್ನೇಹಿ ಕಾರ್ಯಕ್ರಮವನ್ನು ಹಳೆಯಂಗಡಿಯ ಉದ್ಯಮಿ ಜೈ ಕೃಷ್ಣ ಕೋಟ್ಯಾನ್ ರವರು ಗಿಡಕ್ಕೆ ನೀರೆರೆಯುವ ಮೂಲಕ ಉಧ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಪಣಂಬೂರು ಗ್ರಾಮ ಪಂಚಾಯತ್ ಸದಸ್ಯ ಮೋಹನ್ ದಾಸ್ ವಹಿಸಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ, ಬೆಳೆಸುವ ಕಾರ್ಯ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು
ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಅಧ್ಯಕ್ಷೆ ಲತಾ ಡಿ. ಭಟ್ ರವರು ಮಾತನಾಡಿ ಮನೆಯ ಅಂಗಳದಲ್ಲಿ ಹೂವಿನ ಗಿಡ ತರಕಾರಿಗಳನ್ನು ಬೆಳೆಸಿದಲ್ಲಿ ವಿಷ ಮುಕ್ತವಾದಂತಹ ಪರಿಶುಧ್ಧ ಆಹಾರ ಸೇವನೆ ಮಾಡಬಹುದು ಎಂದರು
ಸಂಪನ್ಮೂಲ ವ್ಯಕ್ತಿಗಳಾದ ದಾಕ್ಷಾಯಿಣೀ ವಿಶ್ವೇಶ್ವರ ಹಾಗೂ ಶ್ರೀಮತಿ ಸ್ವಪ್ನಾ ಅವಿನಾಶ್ ರವರು ಸಾವಯವ ಕೈತೋಟ ತಯಾರಿಕೆ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಂತೋಷ್ ದೇವಾಡಿಗ ತೋಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.)ದ ಕಾರ್ಯ ನಿರ್ವಾಹಕಿ ಪದ್ಮಪ್ರಿಯಾ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಯೋಗೀಶ್ ಕೋಟ್ಯಾನ್ ಜಂಟಿ ಸಂಸ್ಥೆಗಳ ಸದಸ್ಯರು, ಸದಸ್ಯೆಯರು, ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಗಾಯತ್ರಿ ಭಾಸ್ಕರ್ ವಂದಿಸಿದರು.
Kshetra Samachara
24/08/2022 02:57 pm