ಮಂಗಳೂರು: ಕರಾವಳಿ ಪ್ರದೇಶಗಳ ಬೀಚ್ ಗೆ ಬಂದ ಎಲ್ಲಾ ಪ್ರವಾಸಿಗರನ್ನು ಎಚ್ಚರಿಸಿ ಮನವೊಲಿಸಿ, ನೀರಿಗೆ ಇಳಿಯದಂತೆ ಮಾಡುವ ಗುರುತರ ಹೊಣೆಗಾರಿಕೆ ಬೀಚ್ ಗಳಲ್ಲಿ ಬೀಚ್ ಗಾರ್ಡ್ ಗಳಾಗಿ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರಿಗೆ ಇದೆ.
ಪ್ರವಾಸಿಗರ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತೇವೆ ಎಂದು ದ. ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಹೇಳಿದರು.
ಸಮಾದೇಷ್ಟರು ಸುರತ್ಕಲ್, ಸಸಿಹಿತ್ಲು, ಪಣಂಬೂರು, ತಣ್ಣೀರುಬಾವಿ ಬೀಚ್ ಗಳಿಗೆ ಭೇಟಿ ನೀಡಿ ಕಡಲಕೊರೆತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು.
ಜಿಲ್ಲಾಧಿಕಾರಿ ಆದೇಶದಂತೆ ಗೃಹರಕ್ಷಕರು ದಿನದ ಎರಡು ಪಾಳಿಗಳಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಮಂಗಳೂರಿನ ಎಲ್ಲಾ 8 ಪ್ರಸಿದ್ಧ ಬೀಚ್ ಗಳಲ್ಲಿ ಜೂನ್ ತಿಂಗಳಿನಿಂದ ಆkಗಸ್ಟ್ ತಿಂಗಳವರೆಗೆ ಕೆಲಸ ನಿರ್ವಹಿಸಲಿದ್ದಾರೆ ಎಂದರು.
Kshetra Samachara
20/07/2022 04:03 pm