ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೊಲಕಾಡಿ ಗುತ್ತು ಸಮೀಪದ ಆಲದ ಮರದ ಕೆಳಗೆ ನೆಲೆನಿಂತ ಸುಮಾರು 500 ವರ್ಷಗಳ ಇತಿಹಾಸವಿರುವ ದೈವ ಪಿಲಿಚಂಡಿ ಎಂದು ಹೇಳಲಾದ ಸಂಪೂರ್ಣ ಅಜೀರ್ಣಾವಸ್ಥೆಯಲ್ಲಿರುವ ದೈವಸ್ಥಾನದ ಅಭಿವೃದ್ಧಿಯ ಬಗ್ಗೆ ಸ್ವರ್ಣ ಪ್ರಶ್ನೆ ಕಾರ್ಯಕ್ರಮ ದೈವಜ್ಞರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಸ್ವರ್ಣ ಪ್ರಶ್ನೆ ನೇತೃತ್ವ ವಹಿಸಿದ್ದ ಗುಣೀಶ್ ಶೆಟ್ಟಿ ಮಾತನಾಡಿ ಸ್ವರ್ಣ ಪ್ರಶ್ನೆ ಮೂಲಕ ಸುಮಾರು 500 ವರ್ಷದ ಇತಿಹಾಸವಿರುವ ಈ ಸ್ಥಳದಲ್ಲಿ ಉಳ್ಳಾಯ, ಪಿಲಿಚಂಡಿ, ಧೂಮಾವತಿ ಮತ್ತು ಪರಿವಾರ ದೈವಗಳ ಸಾನಿಧ್ಯ ಗೋಚರಿಸಿದ್ದು ಸ್ಥಳೀಯ ಜಾಗದವರು ಸ್ಥಳ ದಾನ ಹಾಗೂ ಅಭಿವೃದ್ಧಿಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಜೂನ್ 16,17 ರಂದು ಸ್ವರ್ಣ ಪ್ರಶ್ನೆ ಮತ್ತೆ ನಡೆಯಲಿದ್ದು ಮುಂದಿನ ದಿನಗಳಲ್ಲಿ ಜೀರ್ಣೋದ್ದಾರಕ್ಕೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭ ಅರ್ಚಕ ಶ್ರೀಕಾಂತ್ ಭಟ್ ಕೊಲಕಾಡಿ, ದೆಪ್ಪುಣಿ ಗುತ್ತಿನಾರ್ ಸುಧಾಕರ ಶೆಟ್ಟಿ, ಮುಲ್ಕಿ ನಪಂ ಅಧ್ಯಕ್ಷ ಸುಭಾಶ್ ಶೆಟ್ಟಿ, ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್, ಕಿಲ್ಪಾಡಿ ಗ್ರಾ.ಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಗಂಗಾಧರ ಶೆಟ್ಟಿ ಬೆರ್ಕೆ ತೋಟ, ರಂಗನಾಥ ಶೆಟ್ಟಿ, ವಾಸು ಪೂಜಾರಿ ಕೊಲಕಾಡಿ ,ಊರ ಪರವೂರ ಭಕ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
29/05/2022 10:21 am