ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಮುಲ್ಕಿ ಅರಮನೆಗೆ ಮಾಜಿ ಸಚಿವೆ ಹಾಗೂ ಚಲನಚಿತ್ರ ನಟಿ ಉಮಾಶ್ರೀ ಭೇಟಿ ನೀಡಿದರು.
ಈ ಸಂದರ್ಭ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ನಟಿ ಉಮಾಶ್ರೀಯನ್ನು ಸ್ವಾಗತಿಸಿ ಸೀಮೆಯ ವತಿಯಿಂದ ಗೌರವಿಸಿ ಹಾಗೂ ಸೀಮೆಯ ಚಟುವಟಿಕೆಗಳ ಬಗ್ಗೆ ನಟಿ ಉಮಾಶ್ರೀ ರವರಿಗೆ ಮಾಹಿತಿ ನೀಡಿದರು. ಈ ಸಂದರ್ಭ ಮುಲ್ಕಿ ಅರಮನೆಯ ಗೌತಮ್ ಜೈನ್, ರತ್ನಾಕರ ಯಾನೆ ಕಾಂತಣ್ಣ ಗುರಿಕಾರ, ಶಂಕರ್ ಶೆಟ್ಟಿಗಾರ್, ಆಶಲತಾ ,ರಕ್ಷಾ, ಪವಿತ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/08/2022 02:37 pm