ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ಗದ್ದೆಗೆ ಆಕಸ್ಮಿಕ ಬೆಂಕಿ; ದನಕರುಗಳ ರಕ್ಷಣೆ

ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರಮಂಗಿಲ ದೇವಸ್ಥಾನಕ್ಕೆ ಹೋಗುವ ನೂತನ ರಸ್ತೆಯ ಇಕ್ಕೆಲಗಳ ಗದ್ದೆಗೆ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಭಾರಿ ಗಾಳಿಗೆ ಬೆಂಕಿ ಧಗಧಗನೆ ಉರಿಯಲಾರಂಭಿಸಿದ್ದು ಈ ಸಂದರ್ಭ ಸ್ಥಳದಲ್ಲಿದ್ದ ಅಂಗರಗುಡ್ಡೆ ಭಗತ್ ಸಿಂಗ್ ಪ್ರತಿಷ್ಠಾನದ ಅಧ್ಯಕ್ಷ ಸಂತೋಷ್ ಹಾಗೂ ಸ್ಥಳೀಯರಾದ ಉಮೇಶ್ ಭಂಡಾರಿ ಮತ್ತಿತರರು ಸೇರಿ ನೀರು ಹಾಯಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಗಾಳಿಗೆ ಬೆಂಕಿ ಮತ್ತಷ್ಟು ಧಗಧಗನೆ ಮತ್ತಷ್ಟು ಉರಿಯಲಾರಂಭಿಸಿದ್ದು ಈ ಸಂದರ್ಭದಲ್ಲಿ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಎರಡು ದನ ಹಾಗೂ ಕರುವನ್ನು ಅಪಾಯದಿಂದ ರಕ್ಷಿಸಿ, ಬೆಂಕಿ ನಂದಿಸಿ ಮಾನವೀಯತೆ ಮೆರೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

17/04/2022 03:45 pm

Cinque Terre

9.92 K

Cinque Terre

1

ಸಂಬಂಧಿತ ಸುದ್ದಿ