ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್: ಹಳೆ ಮುಖ್ಯರಸ್ತ ವಿಸ್ತರಣೆ, ಕಾಂಕ್ರಿಟ್ ಕಾಮಗಾರಿಗೆ ಚಾಲನೆ

ಸುರತ್ಕಲ್ :ಮಂಗಳೂರು ನಗರದ ಉತ್ತರದ ಪಾಲಿಕೆ ವಾರ್ಡ್ ನಂಬ್ರ7 ರ ಸುರತ್ಕಲ್ ಹಳೆ ಮುಖ್ಯರಸ್ತೆಯನ್ನು 1.50 ಕೋಟಿ ರೂ.ವೆಚ್ಚದಲ್ಲಿ ವಿಸ್ತರಣೆ, ಕಾಂಕ್ರಿಟ್ ಕಾಮಗಾರಿಗೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ರವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರುಮಂಗಳೂರು ಬಳಿಕ ಕ್ಷಿಪ್ರವಾಗಿ ಸುರತ್ಕಲ್ ಬೆಳೆಯುತ್ತಿದ್ದು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಭವಿಷ್ಯದ ದೃಷ್ಟಿಯಿಂದ ಹೆದ್ದಾರಿಗೆ ಪರ್ಯಾಯವಾಗಿ ರಸ್ತೆಗಳ ನಿರ್ಮಾಣ, ಅಭಿವೃದ್ಧಿ ಆಗತ್ಯವಾಗಿದೆ. ಸುರತ್ಕಲ್ ಹಳೆ ಮುಖ್ಯ ರಸ್ತೆಯನ್ನು 1.50 ಕೋಟಿ ರೂ, ಗುಡ್ಡೆಕೊಪ್ಲ ರಸ್ತೆಯ ವಿಸ್ತರಣೆ ಕಾಂಕ್ರಿಟ್ ಮಾಡಲು ಮಹಾತ್ಮಾ ಗಾಂಧಿ ಮೂಲಸೌಕರ್ಯ ಯೋಜನೆಯಡಿ 1 ಕೋಟಿ, ಜಂಕ್ಷನ್ ಅಭಿವೃದ್ಧಿಗೆ 5 ಕೋಟಿ, ಟ್ರಾಫಿಕ್ ಐಲ್ಯಾಂಡ್ ನಿರ್ಮಾಣ ಹೀಗೆ ವಿವಿಧ ಸವಲತ್ತಿಗೆ ಮುಂದಾಗಿದ್ದೇವೆ ಎಂದರು.

ಸ್ಥಳೀಯ ಕಾರ್ಪೊರೇಟರ್ ನಯನ ಆರ್.ಕೋಟ್ಯಾನ್, ಸರಿತ ಶಶಿಧರ್, ವರುಣ್ ಚೌಟ, ಸುಮಿತ್ರ ಕರಿಯ, ಉದ್ಯಮಿ ಪುಷ್ಪರಾಜ್ ಜೈನ್, ಸತೀಶ್ ಮುಂಚೂರು, ಸುನಿಲ್ ಕುಳಾಯಿ,ಪುಷ್ಪರಾಜ್ ಕಡಂಬೋಡಿ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/03/2022 05:28 pm

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ