ಮುಲ್ಕಿ: ಹೊಸ ಅಂಗಣ ಮಾಸ ಪತ್ರಿಕೆಯ ತಿಂಗಳ ಬೆಳಕು ಕಾರ್ಯಕ್ರಮ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮ ಮುಲ್ಕಿಯ ಪುನರೂರು ಟೂರಿಸ್ಟ್ ಹೋಂ ಸಭಾಭವನದಲ್ಲಿ ಬುಧವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಹಿಸಿ ಮಾತನಾಡಿ ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವುದು ಒಳ್ಳೆಯ ಕೆಲಸ. ಸಾಧಕರಿಂದ ಮುಂದಿನ ದಿನಗಳಲ್ಲಿ ಮುಲ್ಕಿ ಮತ್ತಷ್ಟು ಅಭಿವೃದ್ಧಿಯತ್ತ ದಾಪುಗಾಲು ಹಾಕಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕರ್ತ ದಾನಿ ಪ್ರಬೋದ್ ಚಂದ್ರ ಹೆಜಮಾಡಿ ರವರನ್ನು ಸನ್ಮಾನಿಸಲಾಯಿತು.
ಹೊಸ ಅಂಗಣ ಮಾಸ ಪತ್ರಿಕೆಯ ಮಾಸಿಕ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು
ವೇದಿಕೆಯಲ್ಲಿ ಮುಲ್ಕಿ ಕರ್ನಾಟಕ ಬ್ಯಾಂಕ್ ಶಾಖೆಯ ಪ್ರಬಂಧಕ ಶಿವಪ್ರಸಾದ್ ಶೆಟ್ಟಿ, ಉದ್ಯಮಿ ದೇವದಾಸ ಕಾಮತ್, ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ ಸುವರ್ಣ, ಮಾಜೀ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ವೈ ಎನ್ ಸಾಲ್ಯಾನ್,ಉದ್ಯಮಿ ವಾಸು ಪೂಜಾರಿ ಚಿತ್ರಾಪು, ರವಿ ಶೆಟ್ಟಿ, ವಾಮನ್ ಕೋಟ್ಯಾನ್ ನಡಿಕುದ್ರು ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ. ಹರಿಶ್ಚಂದ್ರ ಸಾಲ್ಯಾನ್, ರವಿಚಂದ್ರ ಮತ್ತಿತರರು ಉಪಸ್ತಿತರಿದ್ದರು.
ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ| ಹರೀಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿದರು, ವಾಮನ್ ಕೋಟ್ಯಾನ್ ನಡಿಕುದ್ರು ಧನ್ಯವಾದ ಅರ್ಪಿಸಿದರು. ರವಿಚಂದ್ರ ನಿರೂಪಿಸಿದರು.
Kshetra Samachara
29/09/2021 10:17 am